FILM
ಎರಡನೇ ಮದುವೆಗೆ ರೆಡಿಯಾದ ಖ್ಯಾತ ನಟಿ ಅಮಲಾ ಪೌಲ್
ಕೇರಳ ಅಕ್ಟೋಬರ್ 26: ಖ್ಯಾತಾ ಬಹುಭಾಷಾ ತಾರೆ ನಟಿ ಅಮಲಾ ಪೌಲ್ ಇದೀಗ ತಮ್ಮ ಎರಡನೇ ಮದುವೆಗೆ ರೆಡಿ ಆಗಿದ್ದಾರೆ. ಗೆಳೆಯ ಜಗತ್ ದೇಸಾಯಿ ಜೊತೆ ಅಮಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಿಶ್ಟಿತಾರ್ಥದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಲಯಾಳಂ ನಟಿ ಅಮಲಾ ಪೌಲ್ ಅವರು ಕನ್ನಡ ಚಿತ್ರರಂಗದವರಿಗೂ ಚಿರಪರಿಚಿತ. ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಮಲಾ ಪೌಲ್ ತಮಿಳು ತೆಲಗು ಚಿತ್ರ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.
ತಮಿಳು ನಿರ್ದೇಶಕ ಎ.ಎಲ್. ವಿಜಯ್ ಜೊತೆ ಅಮಲಾ ಪೌಲ್ ಅವರು 2014ರಲ್ಲಿ ಮದುವೆ ಆದರು. ಆದರೆ ಇವರ ಸಂಬಂಧ ಹೆಚ್ಚು ಸಮಯ ಉಳಿಯಲಿಲ್ಲ. ಮೂರೇ ವರ್ಷಕ್ಕೆ ಇವರು ವಿಚ್ಛೇದನ ಪಡೆದರು. ಇದೀಗ ಅಮಲಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಜಗತ್ ದೇಸಾಯಿ ಜೊತೆ ಈಗ ಅವರು ಮದುವೆ ಆಗುತ್ತಿದ್ದಾರೆ.
ಈ ಜೋಡಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಂಗೇಜ್ಮೆಂಟ್ ಸೆಲೆಬ್ರೇಷನ್ ಹೇಗಿತ್ತು ಎನ್ನುವ ಝಲಕ್ ಇದೆ. ಮಂಡಿ ಊರಿ ಅಮಲಾಗೆ ಜಗತ್ ಪ್ರಪೋಸ್ ಮಾಡಿದ್ದಾರೆ. ಇಬ್ಬರೂ ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಜಗತ್ ಅವರು ‘ನನ್ನ ಕ್ವೀನ್ ಯೆಸ್ ಎಂದಳು. ಹ್ಯಾಪಿ ಬರ್ತ್ಡೇ ಲವ್’ ಎಂದು ಬರೆದುಕೊಂಡಿದ್ದಾರೆ.
You must be logged in to post a comment Login