LATEST NEWS
ಸ್ವಿಟ್ಜರ್ಲೆಂಡ್ ನಲ್ಲಿ ಬುರ್ಖಾ ನಿಷೇಧ – 1 ಲಕ್ಷದವರೆಗೆ ದಂಡ
ಸ್ವಿಟ್ಜರ್ಲೆಂಡ್ ಜನವರಿ 02: ಯುರೋಪಿಯನ್ ದೇಶಗಳಲ್ಲಿ ಈಗಾಗಲೇ ಕೆಲವು ದೇಶಗಳು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿವೆ. ಈ ನಡುವೆ ಪ್ರವಾಸಿಗರ ಸ್ವರ್ಗ ಸ್ವಿಟ್ಜರ್ಲೆಂಡ್ ನಲ್ಲೂ ಜನವರಿ 1 ರಿಂದ ಬುರ್ಖಾ ನಿಷೇಧಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ನಡೆದ ಜನಾಭಿಪ್ರಾಯ ಸಂಗ್ರಹಣೆ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸಿಕ್ಕಿಬಿದ್ದರೆ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶವಿದೆ. ಈ ವಿವಾದಾತ್ಮಕ ಕಾನೂನು ಜಾರಿಗೆ ಬಂದ ತಕ್ಷಣ, ದೇಶದೊಳಗೆ ಮಾತ್ರವಲ್ಲದೆ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ.
ವಾಸ್ತವವಾಗಿ, 2021ರ ಮಾರ್ಚ್ ನಲ್ಲಿ ಸ್ವಿಸ್ ಸರ್ಕಾರವು ಬುರ್ಖಾವನ್ನು ಧರಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಮತದಾನವನ್ನು ನಡೆಸಿತು. ಇದರಲ್ಲಿ 52ರಷ್ಟು ಜನರು ಬುರ್ಖಾ ನಿಷೇಧ ಕಾನೂನಿನ ಪರವಾಗಿ ಮತ ಚಲಾಯಿಸಿದ್ದಾರೆ. 48ರಷ್ಟು ಜನರು ಕಾನೂನಿನ ವಿರುದ್ಧ ಮತ ಚಲಾಯಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಡೆದ ಮತದಾನ ಈಗ ಜಾರಿಯಾಗಿದೆ. ಸರ್ಕಾರ ಹೊರಡಿಸಿದ ಕಾನೂನಿನ ಅಡಿಯಲ್ಲಿ, ಬುರ್ಖಾ ನಿಷೇಧವು ವಿಮಾನಗಳಲ್ಲಿ ಅಥವಾ ರಾಜತಾಂತ್ರಿಕ ಮತ್ತು ಕಾನ್ಸುಲರ್ ಆವರಣದಲ್ಲಿ ಅನ್ವಯವಾಗುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಜನರು ಸ್ವಿಟ್ಜರ್ಲೆಂಡ್‌ನ ಪೂಜಾ ಸ್ಥಳಗಳಲ್ಲಿ ಅಥವಾ ಯಾವುದೇ ರೀತಿಯ ಜಾತ್ಯತೀತ ಸ್ಥಳಗಳಲ್ಲಿ ತಮ್ಮ ಮುಖಗಳನ್ನು ಮುಚ್ಚಿಕೊಳ್ಳಬಹುದು.