Connect with us

  KARNATAKA

  ‘ರಾಮಂದಿರ ನಿರ್ಮಾಣ ಸಂತಸದ ವಿಚಾರ, ಆದ್ರೆ ಪಾಲಿಟಿಕ್ಸ್ ಬೇಡಾ’ : ಸಚಿವ ದಿನೇಶ್ ಗುಂಡೂರಾವ್..!

  ಮಂಗಳೂರು : ರಾಮಮಂದಿರ ನಿರ್ಮಾಣ ಅತ್ಯಂತ ಸಂತಸದ ವಿಚಾರ ಮತ್ತು ಎಲ್ಲರೂ ಹೋಗಲೇಬೇಕು  ಆದರೆ ಇದರಲ್ಲಿ ಪಾಲಿಟಿಕ್ಸ್ ಬೇಡಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

  ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಆದ್ರೆ ಮಂದಿರ ಹೋಗೋಕೆ ಯಾರ ಪರ್ಮಿಷನ್ ಬೇಕಿಲ್ಲ ಮತ್ತು ಅವತ್ತೇ ಹೋಗಬೇಕಂತ ಇಲ್ಲ ರಾಮಂದಿರ ವಿಚಾರವಾಗಿ ಕಾಂಗ್ರೆಸ್ಸನ್ನು ಮಾತ್ರ ಯಾಕೆ ಎಳೆದು ತರುತ್ತೀರಿ ? ಅನೇಕ ಸ್ವಾಮೀಜಿಗಳು ರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ ಅಂತಿದಾರೆ ರಾಜಕೀಯ ವಾತಾವರಣ ನಿರ್ಮಾಣ ಸರಿಯಲ್ಲ ಅಂತ ಜಗದ್ಗುರು ಸ್ವಾಮೀಜಿಗಳೇ ಹೇಳ್ತಿದಾರೆ. ರಾಮಮಂದಿರ ಇದು ಪಾಲಿಟಿಕಲ್ ಕ್ಯಾಂಪೇನ್ ಆಗಬಾರದು, ನಮಗೆಲ್ಲರಿಗೂ ಅಲ್ಲಿಗೆ ಹೋಗಲು ಆಸೆ ಇದೆ. ನಮ್ಮ ದೇಶದಲ್ಲಿ ಇದು ಒಳ್ಳೆಯ ಬೆಳವಣಿಗೆ, ರಾಜ್ಯದಲ್ಲೂ ದೇವಸ್ಥಾನದಲ್ಲಿಆ ದಿನ ಪ್ರಾರ್ಥನೆ ಇದೆ.ರಾಮಮಂದಿರದ ಬಗ್ಗೆ ಗೌರವ ಎಲ್ಲರಿಗೂ ಇದೆ, ಆದರೆ ರಾಜಕಾರಣ ಬೆರೆಸಬಾರದು ಆದ್ರೆ ಆದರೆ ರಾಜಕೀಯ ಲಾಭ ಮತ್ತು ಚುನಾವಣೆಗೋಸ್ಕರ ಬಳಸಲಾಗ್ತಿದೆ.ದೇವಸ್ಥಾನಗಳು ಇರೋದು ನಮಗಾಗಿ, ಭಕ್ತಿಯಿರೋರು ಹೋಗ್ತಾರೆ. ಹೋಗದಿದ್ರೆ ಟೀಕೆ ಮಾಡಬಾರದು ಎಂದು ಸಲಹೆ ನೀಡಿದ್ರು.

   

  Share Information
  Advertisement
  Click to comment

  You must be logged in to post a comment Login

  Leave a Reply