Connect with us

    BANTWAL

    ನೀರು ತುಂಬಿದ್ದ ಕಲ್ಲಿನ ಕೋರೆಗೆ ಬಿದ್ದು ಬಾಲಕ ಸಾವು

    ಬಂಟ್ವಾಳ ಸೆಪ್ಟೆಂಬರ್ 04: ಕೆಂಪು ಕಲ್ಲಿನ ಕೋರೆಗೆ ಬಿದ್ದು 6 ನೇ ತರಗತಿ ವಿದ್ಯಾರ್ಥಿಯೊರ್ವ ಮೃತಪಟ್ಟ ಘಟನೆ ಬಂಟ್ವಾಳ ‌ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಾರೆಕಾಡು ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಬಂಟ್ವಾಳ ಕಸ್ಬಾ ಗ್ರಾಮದ ಬಾರೆಕಾಡ್ ಕ್ವಾಟ್ರಸ್ ನಿವಾಸಿ ಮುಹಮ್ಮದ್ ಸಾದಿಕ್ ಅವರ ಪುತ್ರ ಮುಹಮ್ಮದ್ ಸೌಹಾದ್ (11) ಎಂದು ಗುರುತಿಸಲಾಗಿದೆ.


    ಇಬ್ಬರು ಸ್ನೇಹಿತರ ಜೊತೆ ಆಟವಾಡಲೆಂದು ಇಳಿದಾಗ ಸೌಹಾದ್ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಇಬ್ಬರು ಸ್ನೇಹಿತರು ನೀಡಿದ ಮಾಹಿತಿಯನ್ವಯ ಸ್ಥಳೀಯರು ಧಾವಿಸಿ ಈತನನ್ನು ನೀರಿನಿಂದ ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದ ಎಂದು ತಿಳಿದು ಬಂದಿದೆ.

    ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕಳೆದ ಆರು ತಿಂಗಳಿನಿಂದ ಕೋರೆಯಲ್ಲಿ ಕೆಲಸಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸುತ್ತ ಬೇಲಿ ಹಾಕಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply