KARNATAKA
ಅಂಬಾರಿ ಹೊತ್ತ ಅರ್ಜುನನ ಸಾವು ಅಕಸ್ಮಿಕವೋ, ಕೊಲೆಯೋ ? ಆನೆ ಸಾವಿಗೆ ಜನಾಕ್ರೋಶ, CID ತನಿಖೆಗೆ ಹೆಚ್ಚಿದ ಒತ್ತಡ..!
ಹಾಸನ : ಎಂಟು ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊತ್ತು ಎಲ್ಲರ ಪ್ರೀತಿಪಾತ್ರನಾಗಿದ್ದ ಸಾಕಾನೆ ಅರ್ಜುನ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾದಾಟದಲ್ಲಿ ಹುತಾತ್ಮನಾಗಿದ್ದಾನೆ.
ಆದ್ರೆ ಅರ್ಜುನನ ಸಾವಿನ ಬಗ್ಗೆ ಹಲವು ಅನುಮಾನ ಹುಟ್ಟುಹಾಕಿದ್ದು ಅರಣ್ಯ ಅಧಿಕಾರಿಗಳ ಬೇಜಾವ್ದಾರಿ, ಅವೈಜ್ಞಾನಿಕ ಕಾರ್ಯಾಚರಣೆ ಅರ್ಜುನನ ಸಾವಿಗೆ ಕಾರಣವಾಯ್ತಾ ಎಂಬ ಅನುಮಾನಗಳು ಹುಟ್ಟುಹಾಕಿದ್ದು ಉನ್ನತ ಮಟ್ಟದ ತನಿಖೆಗೆ ಜನತೆ ಆಗ್ರಹಿಸಿದೆ.
ಅರ್ಜುನನ ದುರಂತದ ಸಾವಿಗೆ ಇಡೀ ರಾಜ್ಯವೇ ಮರುಗುತ್ತಿದೆ. ಜನರಿಗೆ ಕಂಟಕವಾಗಿದ್ದ ಕಾಡಾನೆ ಸೆರೆ ಸಂದರ್ಭ ಅಧಿಕಾರಿಗಳು ಮಹಾ ಎಡವಟ್ಟು ಮಾಡಿಕೊಂಡಿದ್ದು ಇದೇ ಅರ್ಜುನನ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳೆಕೆರೆ ಸಮೀಪ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಗುರಿ ತಪ್ಪಿ ಬಿದ್ದ ಅದೊಂದು ಗುಂಡೇಟಿನಿಂದ ಬಲ ಕಳೆದುಕೊಂಡು ಕಾದಾಡಲಾಗದೆ 63 ವರ್ಷದ ಅರ್ಜುನ ಬಲ ಕಳಕೊಂಡ ಬಗ್ಗೆ ಗುಮಾನಿ ಎದ್ದಿದೆ. ಮದದಲ್ಲಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಮದ ಏರಿದ ಸಂದರ್ಭ ಕಾಡಾನೆ ಹುಚ್ಚಾಟವಾಡುತ್ತೆ ಎಂಬ ಮಾಹಿತಿ ಇದ್ದರೂ ಅರಣ್ಯ ಅಧಿಕಾರಿಗಳು ತಪ್ಪು ನಿರ್ಧಾರ ತೆಗೆದುಕೊಂಡರು. ಇದೇ ಅರ್ಜುನನ ಸಾವಿಗೆ ಕಾರಣವಾಯ್ತು ಎಂದು ತಜ್ಞರು ಟೀಕೆ ವ್ಯಕ್ತಪಡಿಸಿದ್ದಾರೆ. ಕಾಡಾನೆ ಸೆರೆಗೆ ತೆರಳಿದ್ದ ವೇಳೆ ಏಕಾ ಏಕಿ ಮದದಲ್ಲಿದ್ದ ಒಂಟಿ ಸಲಗ ದಾಳಿ ಮಾಡಿದೆ. ಸಲಗ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿದಾಗ ಆ ಗುಂಡು ಅರ್ಜುನನ ಕಾಲಿಗೆ ತಗುಲಿರೊ ಬಗ್ಗೆ ಅನುಮಾನ ಎದ್ದಿದೆ. ಗುಂಡು ತಗುಲಿದ ಬಗ್ಗೆ ಕಾರ್ಯಾಚರಣೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಭರ ನೀಡಿರುವ ಹೇಳಿಕೆ ಹಲವು ಅನುಮಾನ ಹುಟ್ಟಿಸಿದೆ. ಅರ್ಜುನನ ಕಾಲಿಗೆ ಗುಂಡು ಬೀಳುತ್ತಲೇ ಬಲ ಕಳೆದುಕೊಂಡಿದ್ದಾನೆ. ಅರ್ಜುನ ಬಲ ಕಳೆದುಕೊಳ್ಳುತ್ತಲೇ ಹಠಾತ್ ಆಗಿ ಒಂಟಿ ಸಲಗ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಅರಣ್ಯ ಇಲಾಖೆ ಕಾರ್ಯಾಚರಣೆ ಸಿಬ್ಬಂದಿ ಯಿಂದ ಮತ್ತೊಂದು ಯಡವಟ್ಟು ನಡೆದಿದೆ. ಕಾಡಾನೆಗೆ ಅರವಳಿಗೆ ಮದ್ದು ನೀಡೋ ವೇಳೆ ಗುರಿ ತಪ್ಪಿ ಕಾರ್ಯಾಚರಣೆಯಲ್ಲಿದ್ದ ಮತ್ತೊಂದು ಸಾಕಾನೆಗೆ ಅರವಳಿಗೆ ನೀಡಿದ ಸಿಬ್ಬಂದಿ. ಮಿಸ್ ಫೈರ್ ಆಗಿ ಸಾಕಾನೆಗೆ ಅರವಳಿಕೆ ಮದ್ದು ಡಾಟ್ ಆಗಿದ್ದರಿಂದ ಕಾರ್ಯಾಚರಣೆ ತಂಡ ಕೂಡ ಬಲ ಕಳೆದುಕೊಂಡು ಸಮಸ್ಯೆಯಾಗಿದೆ. ಕಾರ್ಯಾಚರಣೆ ತಂಡದಿಂದ ಆಕಸ್ಮಿಕವಾಗಿ ಆದ ಯಡವಟ್ಟಿನಿಂದ ಅರ್ಜನ ಬಲಿಯಾದ ಬಗ್ಗೆ ಬಲವಾದ ಅನುಮಾನವಿದೆ. ಈ ಎಲ್ಲಾ ಯಡವಟ್ಟಿನಿಂದ ಕಾಡಾನೆ ಎದುರು ಬಲ ಕಳೆದುಕೊಂಡು ಅರ್ಜನ ಬಲಿಯಾಗಿದ್ದಾನೆ. ಹೀಗಾಗಿ ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯ ಹೆಚ್ಚಿದೆ. ಕಾರ್ಯಾಚರಣೆ ವೇಳೆ ಆದ ಯಡವಟ್ಟಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹ ಹೆಚ್ಚಿದೆ. ಅರ್ಜುನ ಆನೆ ಸಾವನ್ನಪ್ಪಿದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳನ್ನ ಸಸ್ಪೆಂಡ್ ಮಾಡುವಂತೆ ಆಗ್ರಹಿಸಲಾಗಿದೆ. ಈ ಮಧ್ಯೆ ಕಾರ್ಯಾಚರಣೆ ವೇಳೆ ಮಡಿದ ಅರ್ಜುನನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರೀಯೆ ನಡೆಸಲು ಸರ್ಕಾರ ಸಿದ್ದತೆ ನಡೆಸಿದೆ.ಮೈಸೂರು ಅರಮನೆ ಪುರೋಹಿತರಿಂದ ಪೂಜಾ ವಿಧಿ ವಿಧಾನದ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ.
You must be logged in to post a comment Login