Connect with us

    BELTHANGADI

    ಅರಣ್ಯ ಇಲಾಖೆ ಅಧಿಕಾರಿಗಳ ದಬ್ಬಾಳಿಕೆ ವಿರುದ್ದ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    ಬೆಳಗಾವಿ ಡಿಸೆಂಬರ್ 05: ಕಳೆಂಜದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ನಡೆದ ಮಾತಿನ ಚಕಾಮಕಿ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ವಿರುದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಂದು ವಿಧಾನಸಭೆಯಲ್ಲಿ ಹಕ್ಕು ಚ್ಯುತಿ ಮಂಡಿಸಿದ್ದಾರೆ.

    ಅಗಸ್ಟ್ 9 ರಂದು ಕಳೆಂಜ ಗ್ರಾಮದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಬಿಜೆಪಿ ಶಾಸಕರ ಜೊತೆ ಮಾತಿನ ಚಕಮಕಿ ನಡೆಸಿದ್ದರು, ಅಲ್ಲದೆ ಶಾಸಕರ ಮಾತಿಗೆ ಮೀರಿ ಮತ್ತೆ ಮನೆ ಕೆಡವಲು ಪೊಲೀಸ್ ಇಲಾಖೆ ಮೂಲಕ ಮುಂದಾಗಿದ್ದರು, ಈ ವೇಳೆ ಶಾಸಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.


    ಅಲ್ಲದೆ ಸ್ಥಳೀಯ ಶಾಸಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮುಚ್ಚಳಿಕೆ ಬರೆಸಿಕೊಂಡಿದ್ದರು. ಈ ಹಿನ್ನಲೆ ಇಂದು ಬೆಳ್ತಂಗಡಿ ಶಾಸಕ ವಿಧಾನಸಭೆಯಲ್ಲಿ ತಮ್ಮ ಹಕ್ಕುಚ್ಯುತಿ ಆಗಿರುವ ಬಗ್ಗೆ ಮೂವರು ಅಧಿಕಾರಿಗಳ ವಿರುದ್ದ ಹಕ್ಕುಚ್ಯುತಿ ಮಂಡಿಸಿದ್ದಾರೆ.
    ಈ ವೇಳೆ ಮಾತನಾಡಿದ ಅವರು ಅರಣ್ಯಾಧಿಕಾರಿಗಳು ಬಡವನ ಮನೆ ತೆಗೆಯಲು 4 ಕೆಎಸ್ ಆರ್ ಪಿ ಪೊಲೀಸರನ್ನು ಕರೆತಂದಿದ್ದರು, ಅಲ್ಲದೆ ನಮ್ಮ ವಿಧಾನಪರಿಷತ್ ಸದಸ್ಯರ ಮೇಲೆ ಕೈ ಮಾಡಲು ಹೋಗಿದ್ದರು ಎಂದರು. ಈ ಹಿನ್ನಲೆ ಮೊದಲು ತಪ್ಪಿತಸ್ಥ ಮೂವರು ಅರಣ್ಯಾಧಿಕಾರಿಗಳನ್ನು ಅಮಾನತು ಮಾಡಿ ಅವರ ಮೇಲೆ ಹಕ್ಕುಚ್ಯುತಿ ಮಂಡಿಸಬೇಕು ಎಂದು ಆಗ್ರಹಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply