LATEST NEWS
ಮುಂಬೈ – ಮಳೆಗೆ ರನ್ ವೇ ನಿಂದ ಸ್ಕಿಡ್ ಆದ ವಿಮಾನ

ಮುಂಬೈ ಸೆಪ್ಟೆಂಬರ್ 14: ಎಂಟು ಪ್ರಯಾಣಿಕರಿದ್ದ ಖಾಸಗಿ ವಿಮಾನ ಒಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಸ್ಕಿಡ್ ಆದ ಘಟನೆ ನಡೆದಿದೆ.
ಖಾಸಗಿ ವಿಮಾನವು ವಿಎಸ್‌ಆರ್ ವೆಂಚರ್ಸ್‌ಗೆ ಸೇರಿದ್ದು , ವೈಜಾಗ್‌ನಿಂದ ಮುಂಬೈಗೆ ಬರುತ್ತಿತ್ತು. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವಿಮಾನಯಾನ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ವೇ ನಲ್ಲಿ ಇಳಿಯುವಾಗ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 06 ಪ್ರಯಾಣಿಕರು ಮತ್ತು 02 ಸಿಬ್ಬಂದಿ ಇದ್ದರು. ಭಾರೀ ಮಳೆ ಬೀಳುತ್ತಿದ್ದ ಕಾರಣ 700 ಮೀಟರ್ ಅಂತರದ ಗೋಚರಿಸುವಿಕೆ ಮಾತ್ರ ಇತ್ತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಹೇಳಿಕೆಯಲ್ಲಿ ತಿಳಿಸಿದೆ.