Connect with us

    KARNATAKA

    ಬೆಂಗಳೂರು ರಸ್ತೆ ಅಪಘಾತದಲ್ಲಿ ಮಂಗಳೂರು ಯುವಕನ ದಾರುಣ ಅಂತ್ಯ..!

    ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮಂಗಳೂರಿನ ಯುವಕ ದಾರುಣ ಅಂತ್ಯ ಕಂಡಿದ್ದಾನೆ. ಮಂಗಳೂರು ನಗರದ ಕುದ್ರೋಳಿಯ ನಾಹಿದ್ ಸಫಾನ್ (28) ಮೃತಪಟ್ಟ ಯುವಕನಾಗಿದ್ದಾನೆ.

    ಬೆಂಗಳೂರು : ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮಂಗಳೂರಿನ ಯುವಕ ದಾರುಣ ಅಂತ್ಯ ಕಂಡಿದ್ದಾನೆ. ಮಂಗಳೂರು ನಗರದ ಕುದ್ರೋಳಿಯ ನಾಹಿದ್ ಸಫಾನ್ (28) ಮೃತಪಟ್ಟ ಯುವಕನಾಗಿದ್ದಾನೆ.

     

    ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಫಾನ್ ಗುರುವಾರ ಅಪರಾಹ್ನ ಯಲಹಂಕ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ಯಲಹಂಕದ ನೆಹರೂ ನಗರದಲ್ಲಿ ವಾಸವಾಗಿದ್ದ ಇವರು ತನ್ನ ಸ್ಕೂಟರ್‌ನಲ್ಲಿ ಯಲಹಂಕದಿಂದ ಬೆಂಗಳೂರು ಕಡೆಗೆ ಸರ್ವಿಸ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಯಲಹಂಕ ಬಿಬಿ ರಸ್ತೆಯ ಏರೋ ಡ್ರಂ ಬಳಿ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

    ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದ ನಾಹಿದ್ ಸಫಾನ್ ತಂದೆ ಮತ್ತು ತಾಯಿ ಹಾಗೂ ಅಣ್ಣ, ಅಕ್ಕ, ಪತ್ನಿಯನ್ನು ಅಗಲಿದ್ದಾರೆ.

    ನಾಹಿದ್ ಸಫಾನ್‌ರ ಸಂಬಂಧಿ ವಸೀಂ ಶರೀಫ್ ನೀಡಿದ ದೂರಿನಂತೆ ಯಲಹಂಕ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply