LATEST NEWS
ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿದ ವಿಶು ಶೆಟ್ಟಿ
ಉಡುಪಿ ಅಕ್ಟೋಬರ್ 4: ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಧರಿಸದೆ ತಿರುಗಾಡುತ್ತಾ, ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥನನ್ಬು ರಕ್ಷಿಸಲಾಗಿದೆ. ಸಮಾಜಸೇವಕ ವಿಶು ಶೆಟ್ಟಿ ಅವರ ರಕ್ಷಣಾ ಕಾರ್ಯಚರಣೆ ಜನರವಮೆಚ್ಚುಗೆಗೆ ಪಾತ್ರವಾಗಿದೆ.ಮಲ್ಪೆ ಪರಿಸರದಲ್ಲಿ ಈತ ಭಯದ ವಾತಾವರಣ ಸೃಷ್ಟಿಸಿದ್ದ.
ಏಲ್ಲಿಂದಲೋ ವಲಸೆ ಬಂದಿರುವ ಈತನ ಉಗ್ರ ಸ್ವಭಾವದ ವರ್ತನೆಗೆ ಸಾರ್ವಜನಿಕರು ರೋಸಿ ಹೋಗಿದ್ದರು. ರಸ್ತೆಯಲ್ಲಿ ಸಂಚರಿಸಲು ಹೆದರುತ್ತಿದ್ದರು. ವಿನಾಕಾರಣ ಕಲ್ಲುಗಳನ್ನು ಎಸೆಯುತ್ತಿದ್ದ ಈತ, ಮಹಿಳೆಯರನ್ನು ಕಂಡರೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಅಶ್ಲೀಲ ಚೆಷ್ಟೆಗಳನ್ನು ಮಾಡಿಕೊಂಡಿದ್ದ. ಗಡ್ಡ ಬೆಳೆದು, ಸ್ನಾನ ಮಾಡದೆ ಇರುವುದರಿಂದ ಇತನ ಬಳಿ ಗಬ್ಬು ವಾಸನೆ ಹೊಡೆಯಿತ್ತಿತ್ತು.
ಈತನ ಉಪಟಳದಿಂದ ರಕ್ಷಣೆ ಒದಗಿಸುವಂತೆ, ಆತನಿಗೂ ಪುರ್ನವಸತಿ ಕಲ್ಪಿಸುವಂತೆ ಸ್ಥಳೀಯ ಮಹಿಳೆಯರು ದೂರಿದ್ದರು. ಸಮಾಜ ಸೇವಕ ವಿಶು ಶೆಟ್ಟಿ ಅವರು ತಕ್ಷಣವೇ ಸ್ಪಂದಿಸಿ,ಹುಡುಕಾಟ ನಡೆಸಿ, ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ಮಾನಸಿಕ ಯುವಕ ಉಗ್ರ ವರ್ತನೆ ತೋರಿದರೂ, ವಿಶು ಶೆಟ್ಟಿ ಆತನ ಮನವೊಲಿಸಿ ವಶಕ್ಕೆ ಪಡೆದಿದ್ದಾರೆ.
ಆಸ್ಪತ್ರೆ ಶುಶ್ರೂಷಕ ಪ್ರದೀಪ್ ಅವರ ಸಹಾಯದಿಂದ, ಆತನ ಜಡೆಕಟ್ಟಿರುವ ತಲೆಕೂದಲು ಗಡ್ಡವನ್ನು ಬೊಳಿಸಿದ್ದಾರೆ. ಸ್ನಾನ ಮಾಡಿಸಿ ಶುಚಿಗೊಳಿಸಿದ್ದಾರೆ. ಬದಲಿ ಬಟ್ಟೆ ತೊಡಿಸಿದ್ದಾರೆ. ಸದ್ಯ ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದಲ್ಲಿ , ಚಿಕಿತ್ಸೆ ಹಾಗೂ ಆಶ್ರಯಕ್ಕೆ ವ್ಯವಸ್ಥೆ ಮಾಡಲಾಗಿದೆ.