FILM
ನಡುಗುವ ಕೈ..ಮಾತನಾಡಲು ಕಷ್ಟಪಡುವ ತಮಿಳಿನ ನಟ ವಿಶಾಲ್ ಸ್ಥಿತಿ ನೋಡಿ ಶಾಕ್ ಆದ ಅಭಿಮಾನಿಗಳು…
ಚೆನ್ನೈ ಜನವರಿ 05: ತಮಿಳಿನ ಖ್ಯಾತ ನಟ ವಿಶಾಲ್ ಅವರ ನೂತನ ಸಿನೆಮಾ ಮದಗಜರಾಜ ಚಿತ್ರದ ಪ್ರೀ ರಿಲೀಸ್ ಫಂಕ್ಷನ್ ನಡೆದಿದ್ದು, ಅದರಲ್ಲಿ ನಟ ವಿಶಾಲ್ ಮೈಕ್ ಹಿಡಿದಾಗ ಕೈ ನಡುಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಗೆ ನಟನಿಗೆ ಏನಾಗಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ತಮಿಳಿನ ಖ್ಯಾತ ನಟ, ಉತ್ತಮ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ನಟ ವಿಶಾಲ್ ಅವರ ಈಗಿನ ಸ್ಥಿತಿ ನೋಡಿ ಅಭಿಮಾನಿಗಳಿಗೆ ಶಾಕ್ ಆಗಿದೆ. ತಮ್ಮ ಹಳೆಯ ಸಿನೆಮಾ ಮದಗಜರಾಜ ಚಿತ್ರದ ಪ್ರೀ ರಿಲೀಸ್ ಪಂಕ್ಷನ್ ನಲ್ಲಿ ನಟ ವಿಶಾಲ್ ಮಾತನಾಡುವ ವೇಳೆ ಅವರ ಕೈ ನಡುಗಿದ್ದು, ಮಾತನಾಡಲು ಕೂಡ ಕಷ್ಟಪಟ್ಟಿದ್ದಾರೆ.
2012ರಲ್ಲಿ ಸುಂದರ್ ಸಿ ನಿರ್ದೇಶನದ ವಿಶಾಲ್ ಅಭಿನಯದ ‘ಮದಗಜರಾಜ’ ಚಿತ್ರೀಕರಣವೂ ಅಷ್ಟೇ ವೇಗದಲ್ಲಿ ಮುಗಿದಿತ್ತು. ಇದೇ ವರ್ಷ ಚಿತ್ರ ತೆರೆಗೆ ಬರುವ ನಿರೀಕ್ಷೆ ಇತ್ತು. ಆದರೆ ಬಿಡುಗಡೆ ಮಾಡಿಲ್ಲ. ವಿಶಾಲ್, ಸಂತಾನಂ, ವರಲಕ್ಷ್ಮಿ, ಸತೀಶ್, ನಿತಿನ್ ಸತ್ಯ, ಸೋನುಸೂದ್, ಅಂಜಲಿ, ದಿವಂಗತ ನಟರಾದ ಮಣಿವಣ್ಣನ್, ಮನೋಬಾಲಾ, ಮೈಲಸ್ವಾಮಿ, ಚಿಟ್ಟಿಬಾಬು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮದಗಜರಾಜ’ ಚಿತ್ರವನ್ನು ಜೆಮಿನಿ ಫಿಲ್ಮ್ ಸರ್ಕ್ಯೂಟ್ ನಿರ್ಮಿಸಿದೆ. ಸದ್ಯ 12 ವರ್ಷಗಳ ಬಳಿಕ ಈ ಚಿತ್ರ ಇದೀಗ ಬಿಡುಗಡೆಯಾಗಲಿದೆ.
Devastated to see u like this @VishalKOfficial na – may lord Murugan give u all the strength to get your physical and mental strength back ! pic.twitter.com/StFjdL8SsX
— Prashanth Rangaswamy (@itisprashanth) January 5, 2025
1 Comment