Connect with us

LATEST NEWS

ಉಡುಪಿ: ವಿಶಾಲ ಗಾಣಿಗ ಕೊಲೆ ಪ್ರಕರಣ – ಪತಿ ರಾಮಕೃಷ್ಣ ಗಾಣಿಗ ಪೊಲೀಸ್ ವಶಕ್ಕೆ?

ಉಡುಪಿ ಜುಲೈ 20: ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಗಾಗಿ ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.


ಬ್ರಹ್ಮಾವರ ಸಮೀಪದ ಉಪ್ಪಿನಕೋಟಿಯ ಬಳಿ ಇರುವ ಮಿಲನ ರೆಸಿಡೆನ್ಸಿಯಲ್ಲಿ ವಿಶಾಲ ಗಾಣಿಗ ಅವರನ್ನು ವೈಯರ್ ಮೂಲಕ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು, ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರು , ಪ್ರಕರಣ ಭೇದಿಸಲು 6 ತಂಡಗಳನ್ನು ರಚನೆ ಮಾಡಲಾಗಿತ್ತು. ಈ ನಡುವೆ ಕೆಲವು ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ ನಂತರ ಪ್ರತಿದಿನ ಪೊಲೀಸ್ ಠಾಣೆಗೆ ಹಾಜರಾಗುವಂತೆ ರಾಮಕೃಷ್ಣ ಅವರಿಗೆ ಪೊಲೀಸರು ತಿಳಿಸಿದ್ದರು.

ಆದರೆ ಆತ ಪೊಲೀಸ್ ತನಿಖೆ ಪ್ರಕ್ರಿಯೆಗೆ ಸರಿಯಾಗಿ ಆಗಮಿಸುತ್ತಿರದ ಕಾರಣ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದ್ದು, ಈಗ ಕೊಲೆ ಪ್ರಕರಣದಲ್ಲಿ ಆತನ ಕೈವಾಡದ ಬಗ್ಗೆ ಪೊಲೀಸರಿಗೆ ಸಂಶಯ ಬಂದಿದ್ದು, ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ದುಬೈನಲ್ಲಿದ್ದುಕೊಂಡು ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದು, ಬಾಡಿಗೆ ಹಂತಕರ ಮೂಲಕ ಕೊಲೆಗೆ ಸುಪಾರಿ ನೀಡಿದ್ದಾನೆ ಎಂದು ಹೇಳಲಾಗಿದೆ. ಸುಫಾರಿ ಹಂತಕರು ಉತ್ತರ ಭಾರತ ಮೂಲದವರಾಗಿದ್ದು, ಸುಪಾರಿ ಹಂತಕರನ್ನು ಬಂಧಿಸಿರುವ ಪೊಲೀಸರು, ಇಂದು ಉಡುಪಿಗೆ ಕರೆ ತಂದು ಅಧಿಕೃತವಾಗಿ ಕೊಲೆಯ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣನ ಆಕ್ರಮ ಸಂಬಂಧ, ಆಸ್ತಿ ವ್ಯವಹಾರವೇ ವಿಶಾಲ ಕೊಲೆಗೆ ಕಾರಣ‌ವಾಗಿರಬಹುದು ಎಂದು ಹೇಳಲಾಗಿದ್ದು. ಪೊಲೀಸರ ಇಲಾಖೆಯ ಮಾಹಿತಿ ನೀಡಿದ ಬಳಿಕವಷ್ಟೇ ಕೊಲೆಯ ಬಗ್ಗೆ ಸ್ಪಷ್ಟ ಚಿತ್ರಣ ಬರಲಿದೆ.