Connect with us

LATEST NEWS

ಆಂಬ್ಯುಲೆನ್ಸ್ ಗೆ ದಾರಿ ಬಿಡದ ಕಾರು ಚಾಲಕ ಪೊಲೀಸ್ ವಶಕ್ಕೆ

ಮಂಗಳೂರು ಜುಲೈ 20: ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ದಾರಿ ಕೊಡದೆ, ಬೇಕಾಬಿಟ್ಟಿಯಾಗಿ ಕಾರು ಓಡಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಕಾರು ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕಡೆಯಿಂದ ಪಂಪ್ ವೆಲ್ ಮಾರ್ಗವಾಗಿ ರೋಗಿಯೊಬ್ಬರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ಆಂಬ್ಯುಲೆನ್ಸ್ ಗೆ ಎರ್ಟಿಗಾ ಕಾರು KA-19 MJ 8924 ಕಾರು, ಸೈಡ್ ಕೊಡದೆ ಅಡ್ಡಾದಿಡ್ಡಿಯಾಗಿ ಚಲಿಸಿದೆ, ಈ ಘಟನೆಯ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಕಾರು ಚಾಲಕನ ಅಜಾಗರೂಕತೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.


ಈ ವಿಡಿಯೋ ಗಮನಿಸಿದ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು ಆರೋಪಿ ಚಾಲಕನ ವಿರುದ್ದ ಮೋಟಾರ್ ವಾಹನ ಕಾಯ್ದೆಯಡಿ ಸ್ವದೂರು ದಾಖಲಿಸಿ ಉಳ್ಳಾಲ ನಿವಾಸಿ ಕಾರು ಚಾಲಕ ಆರೋಪಿ ಚರಣ್ ಅವರನ್ನು ವಶಕ್ಕೆ ಪಡೆದಿದ್ದಾರೆ.


ಯಾವುದೇ ತುರ್ತುವಾಹನ ಸೈರನ್ ಹಾಕಿಕೊಂಡು ಸಂಚರಿಸುತ್ತಿದ್ದ ಸಂದರ್ಭ ವಾಹನವನ್ನು ಹಿಂಬಾಲಿಸಿದ್ದಲ್ಲಿ ಅಥವಾ ಸಂಚಾರಕ್ಕೆ ಅವಕಾಶ ಅಡ್ಡಿಪಡಿಸಿದರೆ 1000 ದಂಡ ಅಥವಾ 6 ತಿಂಗಳ ಕಾಲ ಜೈಲು ಶಿಕ್ಷೆ ಇದೆ.