FILM
ಇಂಡಿಯಾ ಗೇಟ್‌ನಲ್ಲಿ ಟವೆಲ್‌ನಲ್ಲಿ ಕೋಲ್ಕತ್ತಾ ಮಾಡೆಲ್‌ನ ಬೋಲ್ಡ್ ಡ್ಯಾನ್ಸ್
ದೆಹಲಿ ನವೆಂಬರ್ 20: ಕೊಲ್ಕತ್ತಾ ಮೂಲದ ಮಾಡೆಲ್ ಒಬ್ಬರು ದೆಹಲಿಯ ಇಂಡಿಯಾಗೇಟ್ ಬಳಿ ಟವೆಲ್ ಡ್ಯಾನ್ಸ್ ಮಾಡಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಸನ್ನತಿ ಮಿಶ್ರಾ (sannati__) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಂತರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸನ್ನತಿ ಒಂದು ಬಿಳಿ ಟವೆಲ್ ಸುತ್ತಿಕೊಂಡು ಡಾನ್ಸ್ ಮಾಡುವ ದೃಶ್ಯವನ್ನು ಕಾಣಬಹುದು. ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಇಂಡಿಯಾ ಗೇಟ್ ಮುಂದೆ ಬರೀ ಟವೆಲ್ ಸುತ್ತಿ ನಿಂತ ಸನ್ನತಿ ಹಿಂದಿ ಹಾಡೊಂದಕ್ಕೆ ಲಿಪ್ ಸಿಂಕ್ ಮಾಡುತ್ತಾ ಡಾನ್ಸ್ ಮಾಡಿದ್ದಾಳೆ.
ಈ ವಿಡಿಯೋ ವೈರಲ್ ಆಗಿ ಎರಡು ಗಂಟೆಗಳಲ್ಲಿ, ಪೋಸ್ಟ್ 200,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಇದೀಗ ರೀಲ್ಸ್ ಹುಚ್ಚು ಹೆಚ್ಚಾಗಿದ್ದು, ಯುವತಿಯರು ರಸ್ತೆಯಲ್ಲಿ ತುಂಡುಗೆಯಲ್ಲಿ ತಿರುಗಾಡಲಾರಂಭಿಸಿದ್ದಾರೆ ಎಂದು ಕೆಲವು ಕಮೆಂಟ್ ಮಾಡಿದ್ದಾರೆ.
મિસ કોલકાતા સન્નતી મિત્રાની આ હરકત કેટલી યોગ્ય…???? #Delhi #indiagate #sannatimitra @sanna_exclusive pic.twitter.com/Au3a10DQ0h
— kinjal.thakar (@kinjalthakar_98) November 20, 2024