Connect with us

    LATEST NEWS

    ಶಬರಿಮಲೆ ಸಂಪ್ರದಾಯ ಧಿಕ್ಕರಿಸಿ ಹೋಗುವುದು ಸರಿಯಲ್ಲ – ‍ಪಲಿಮಾರು ವಿದ್ಯಾಧೀಶ ಶ್ರೀ

    ಶಬರಿಮಲೆ ಸಂಪ್ರದಾಯ ಧಿಕ್ಕರಿಸಿ ಹೋಗುವುದು ಸರಿಯಲ್ಲ – ‍ಪಲಿಮಾರು ವಿದ್ಯಾಧೀಶ ಶ್ರೀ

    ಉಡುಪಿ ಜನವರಿ 2: ಶಬರಿಮಲೆ ವಿಚಾರದಲ್ಲಿ ಧಾರ್ಮಿಕ ಸಂವಿಧಾನದ ಉಲ್ಲಂಘನೆ ಮಾಡುವುದು ಸರಿಯಲ್ಲ ಎಂದು ಪರ್ಯಾಯ ‍ಪಲಿಮಾರು ಮಠದ ವಿದ್ಯಾಧೀಶ ಶ್ರೀ ಗಳು ಹೇಳಿದ್ದಾರೆ.

    ಪ್ರತಿಯೊಂದು ಕ್ಷೇತ್ರಕ್ಕೆ ತನ್ನದೇ ಆದ ಶಿಷ್ಟಾಚಾರ ಇರುತ್ತದೆ. ಶಬರಿಮಲೆ ವಿಚಾರದಲ್ಲಿ ಚರ್ಚೆ- ಜಗಳಕ್ಕಿಂತ ಧಾರ್ಮಿಕ ಪ್ರೊಟೋಕಾಲ್ ಅನುಸರಿಸಿ ಎಂದು ಕರೆ ನೀಡಿದ್ದಾರೆ.

    ದೇಶದ ರಾಷ್ಟ್ರಪತಿ, ಪ್ರಧಾನಿಗೂ ಒಂದು ಶಿಷ್ಟಾಚಾರ ಇದೆ. ಅದೇ ರೀತಿ ಶಬರಿಮಲೆಯಲ್ಲಿ ಒಂದು ಶಿಷ್ಟಾಚಾರ ಜಾರಿಯಲ್ಲಿದೆ. ಈ ಶಿಷ್ಟಾಚಾರವನ್ನು ಶಬರಿಮಲೆಯಲ್ಲಿ ಇಷ್ಟುವರ್ಷ ಒಪ್ಪಲಾಗಿದೆ. ಆದರೆ ಈಗ ಹೊರಗಿನವರು ಬಂದು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಆಕ್ಷೇಪಿಸುವುದು ಯಾಕೆ ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.

    ಶಬರಿಮಲೆಯಲ್ಲಿ ಹೆಣ್ಮಕ್ಕಳಿಗೆ ಬಹಿಷ್ಕಾರ ಹಾಕಿಲ್ಲ, ಆದರೆ ಮಹಿಳೆಯರಿಗೆ ನಿಗದಿತ ಅವಧಿ ನಿರ್ಧರಿಸಲಾಗಿದೆ. ಶಬರಿಮಲೆಗೆ ಭಕ್ತಿಯಿಂದ ಹೋದರೆ ಅಡ್ಡಿಯಿಲ್ಲ ಆದರೆ ದೇವಾಲಯದ ಸಂಪ್ರದಾಯ ಧಿಕ್ಕರಿಸಿ ಹೋಗುವುದು ನಮಗೆ ಇಷ್ಟವಾಗುತ್ತಿಲ್ಲ ಎಂದು ಹೇಳಿದರು.

    ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಆಕ್ಷೇಪಿಸಲ್ಲ, ಆದರೆ ಸುಪ್ರೀಂಕೋರ್ಟ್ ತೀರ್ಪನ್ನು ಪರಾಮರ್ಶೆ ಮಾಡಲಿ, ಅಯ್ಯಪ್ಪ ಭಕ್ತರಿಗ ಸಮಸ್ಯೆ ಆಗದಂತೆ ಕೋರ್ಟ್ ತೀರ್ಮಾನಿಸಲಿ, ಅಲ್ಲದೆ ಕ್ಷೇತ್ರದ ಸಂಪ್ರದಾಯ ನಿಯಮಾವಳಿಗೆ ಅವಕಾಶ ಕೊಡಬೇಕಾಗಿ ವಿನಂತಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply