Connect with us

FILM

ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ..!?

ಬೆಂಗಳೂರು, ಜನವರಿ 22: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್ ಹೆಸರು ಬದಲಾಗಿದ್ದು, ಇದೀಗ ವಿಕ್ರಾಂತ್ ರೋಣನಾಗಿ ಜನವರಿ 31ರಂದು ಬುರ್ಜ್ ಖಲೀಫ ಮೇಲೆ ಅಬ್ಬರಿಸಲಿದ್ದಾನೆ.

ಹೌದು. ಈ ಸಂಬಂಧ ನಿರ್ದೇಶಕ ಅನೂಪ್ ಭಂಡಾರಿ ಅವರು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಜನವರಿ 31 ರಂದು ಟೈಟಲ್ ಲೋಗೋ ಹಾಗೂ 3 ನಿಮಿಷದ ವೀಡಿಯೋವನ್ನು ಬುರ್ಜ್ ಖಲೀಫ ಮೇಲೆ ರಿವೀಲ್ ಮಾಡೋದಾಗಿ ತಿಳಿಸಿದ್ದಾರೆ. ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ..!

ಈ ಹಿಂದೆ ಫ್ಯಾಂಟಮ್ ಲೋಕದ ಸೃಷ್ಟಿಕರ್ತ ಅನೂಪ್ ಭಂಡಾರಿ ಟ್ವೀಟ್ ಮಾಡಿ, ಇದೇ ಜನವರಿ 21ಕ್ಕೆ ಚಿತ್ರತಂಡದಿಂದ ದೊಡ್ಡ ಘೋಷಣೆಯೊಂದು ಹೊರ ಬೀಳಲಿದೆ ಎಂದು ತಿಳಿಸಿದ್ದರು. ಈ ಅನೌನ್ಸ್ ಜೊತೆ ಹೆಗಲ ಮೇಲೆ ಗನ್ ಹಿಡಿದು, ಬೆರಳಲ್ಲಿ ಟಿಗರ್ ಹಿಡಿದು ಮಾಸ್ಕ್ ತೊಟ್ಟ ವಿಕ್ರಾಂತ್ ರೋಣನ ಲುಕ್ ಸಹ ಔಟ್ ಆಗಿತ್ತು. ಇದು ದೊಡ್ಡ ಅನೌನ್ಸ್‍ಮೆಂಟ್ ಮುಂಚೆನೇ ಕಿಚ್ಚನ ಬಳಗಕ್ಕೆ ಊಟಕ್ಕೆ ಮೊದಲೇ ಜಿಲೇಬಿ ಸಿಕ್ಕಂತಾಗಿತ್ತು. ಪಕ್ಕಾ 90ರ ದಶಕದ ಹೀರೋಗಳ ಸ್ಟೈಲಿನಲ್ಲಿ ಕ್ಯಾಪ್, ಜಾಕೆಟ್ ಕಾಣಿಸಿಕೊಂಡಿರುವ ಸುದೀಪ್ ಕಣ್ಣುಗಳು ನೋಡುಗರನ್ನ ಸೆಳೆಯುತ್ತಿವೆ.

ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Share Information
Advertisement
Click to comment

You must be logged in to post a comment Login

Leave a Reply