Connect with us

LATEST NEWS

ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ – ಆರೋಪಿ ಸೆರೆ

ಉಡುಪಿ ಜನವರಿ 22: ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ ಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿಯನ್ನು ಉಪ್ಪಿನಂಗಡಿ ನಿವಾಸಿ ಪ್ರಾಣೇಶ್ ಎಂದು ಗುರುತಿಸಲಾಗಿದ್ದು, ಈತ ಕಾಲೇಜಿಗೆ ಬಿಡುತ್ತೇನೆಂದು ನಂಬಿಸಿ ವಿದ್ಯಾರ್ಥಿನಿಯೊಬ್ಬಳನ್ನು ಕಾರಿನಲ್ಲಿ ಕುಳಿರಿಸಿ ಅಮಲು ಭರಿತ ಜ್ಯೂಸ್ ಕುಡಿಸಿ ನೇರವಾಗಿ ಉಪ್ಪಿನಂಗಡಿ ಬಂದಾರು ಮನೆಯೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರಗೈದು ಆಕೆಯ ನಗ್ನ ಚಿತ್ರಗಳನ್ನು ಸೆರೆ ಹಿಡಿದಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ ಆರೋಪಿ ಉಪ್ಪಿನಂಗಡಿ ಬಂದಾರಿನ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ವೆಸಗಿದಲ್ಲದೆ ನಿನ್ನ ನಗ್ನ ಚಿತ್ರಗಳು ಸೆರೆ ಹಿಡಿದಿದ್ದೇನೆ.

ಯಾರಿಗಾದರೂ ವಿಚಾರ ತಿಳಿಸಿದರೆ ಅದನ್ನು ಬಿಡುಗಡೆ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಾನೆ. ಇದಕ್ಕೆ ಹೆದರಿದ ಯುವತಿ ಆತನ ದುಷ್ಕೃತ್ಯವನ್ನು ಇತರರಿಗೆ ತಿಳಿಸಿರಲಿಲ್ಲ. ಅದನ್ನೇ ಬಂಡವಾಳವನ್ನಾಗಿ ಮಾಡಿದ ಆರೋಪಿ ಪ್ರಾಣೇಶ್ ವಿದ್ಯಾರ್ಥಿನಿಗೆ ಅಗ್ಗಿಂದಾಗೆ ಕರೆ ಮಾಡಿ ಕರೆದಲ್ಲಿಗೆ ಬಾರದೇ ಹೋದಲ್ಲಿ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದನು ಎನ್ನಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *