Connect with us

DAKSHINA KANNADA

ಮಂಗಳೂರು ಖಾಸಗಿ ಕಾಲೇಜಿನ ರಾಗಿಂಗ್ ಪ್ರಕರಣ: 9 ವಿದ್ಯಾರ್ಥಿಗಳ ಬಂಧನ

ಮಂಗಳೂರು, ಜನವರಿ 22: ಕರಾವಳಿ ನಗರಿ ಎಜ್ಯುಕೇಷನ್ ಹಬ್ ಎಂದೇ ಖ್ಯಾತಿ ಪಡೆದ ಮಂಗಳೂರು ಡ್ರಗ್ ಮಾಫಿಯಾದ ಬಳಿಕ ರಾಗಿಂಗ್ ಎನ್ನುವ ಮಹಾ ಪಿಡುಗಿಗೆ ಇದೀಗ ಸುದ್ದಿಯಾಗುತ್ತಿದೆ.

ಈ ಸಂಬಂಧ ಮಂಗಳೂರು ನಗರದ ಹೊರ ವಲಯದ ವಳಚ್ಚಿಲ್ ಶ್ರೀನಿವಾಸ ಕಾಲೇಜಿನ ಒಂಭತ್ತು ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಬಂಧಿತರು ಕೇರಳ ಮೂಲದವರಾಗಿದ್ದು ಕ್ಯಾಲಿಕಟ್, ಕಣ್ಣೂರು, ಕಾಸರಗೋಡು ಮತ್ತು ಮಲಪುರಂ ಜಿಲ್ಲೆಯವರಾಗಿದ್ದಾರೆ. ರಾಗಿಂಗ್ ಒಳಗಾದ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳು ಫಾರ್ಮಸಿಯ 2 ನೇ ಮತ್ತು ಮೂರನೇ ವರ್ಷದ  ವಿದ್ಯಾರ್ಥಿಗಳಾಗಿದ್ದಾರೆ.ಜಿಷ್ಣು, ಶೀಕಂಠ, ಅಶ್ವಥ್, ಸಾಯಿನಾಥ್, ಅಭಿನವ್ ರಾಜೀವ್, ರಾಹುಲ್, ಜಿಶು,ಮುಕ್ತಾರ್ ಅಲಿ,ಮೊಹಮ್ಮದ್ ರಝೀಂ ಬಂಧಿತ ವಿದ್ಯಾರ್ಥಿಗಳಾಗಿದ್ದಾರೆ.

ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಕೂಡ ಉಡಾಫೆಯಿಂದ ವರ್ತಿಸಿದೆ. ಇಂತಹ ಸೂಕ್ಷ್ಮಾ ವಿಷಯಗಳ ಬಗ್ಗೆ  ಕಾಲೇಜು ಆಡಳಿತ ಮಂಡಳಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ವಿದ್ಯಾರ್ಥಿಗಳು ರಾಗಿಂಗ್ , ಅಮಲು ಪದಾರ್ಥಗಳಂತಹ ದುಷ್ಚಟಗಳಿಗೆ ಬಲಿಯಾಗಬೇಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಮನವಿ ಮಾಡಿದ್ದಾರೆ.

ಇಲ್ಲವಾದಲ್ಲಿ ಇಂತಹುದಕ್ಕೆ ಕಡಿವಾಣ ಹಾಕಲು ಪೊಲೀಸ್ ಕ್ರಮಗಳು ಅನಿವಾರ್ಯವಾಗಿದ್ದು ಇದರಿಂದ ವಿದ್ಯಾರ್ಥಿಗಳ ಬಂಧನದೊಂದಿಗೆ ಮುಂದಿನ ಭವಿಷ್ಯ ಕೂಡ ಮಾರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.