Connect with us

    LATEST NEWS

    ಮಂಗಳೂರು ಅಪಾರ್ಟ್ ಮೆಂಟ್ ನಲ್ಲಿ ವಿಯೆಟ್ನಾಂ ವಿದೇಶಿಗರ ಪುಂಡಾಟಿಕೆ

    ಮಂಗಳೂರು ಅಪಾರ್ಟ್ ಮೆಂಟ್ ನಲ್ಲಿ ವಿಯೆಟ್ನಾಂ ವಿದೇಶಿಗರ ಪುಂಡಾಟಿಕೆ

    ಮಂಗಳೂರು ಎಪ್ರಿಲ್ 17: ಕ್ವಾರಂಟೈನ್ ನಲ್ಲಿರುವ ಐವರು ವಿದೇಶಿಗರು  ಕ್ವಾರಂಟೈನ್ ಆದೇಶ ಉಲ್ಲಂಘಿಸಿ ತಿರುಗಾಡ ನಡೆಸಿದ್ದಲ್ಲದೆ ಅಪಾರ್ಟ ಮೆಂಟ್ ನ ಗೊಡೆಗಳಿಗೆ ಉಗಿಯುವ ಮೂಲಕ ಆತಂಕ ಸೃಷ್ಠಿಸಿದ ಘಟನೆ ಮಂಗಳೂರಿನ  ಕೊಡಿಯಲ್‌ ಬೈಲ್‌ ನ ಖಾಸಾಗಿ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ.

    ಮಂಗಳೂರಿನ ಕೊಳೂರು ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ  ವಿಯೆಟ್ನಾಂ ನಿಂದ ಆಗಮಿಸಿದ್ದ 5 ಮಂದಿ ವಿದೇಶಿಗರು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದರು.

    ಕೊರೊನಾ ಹಿನ್ನಲೆ ಜಿಲ್ಲಾಡಳಿತ ಈ 5 ಮಂದಿ ವಿದೇಶಿಗರನ್ನು  ಹೋಂ ಕ್ವಾರಂಟೈನ್ ಮಾಡಿತ್ತು. ಆದರಲ್ಲಿ  ಈ ಇಬ್ಬರು ಯುವಕರು  ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿ ಅಪಾರ್ಟ್ ಮೆಂಟ್ ಸುತ್ತ ಬೇಕಾಬಿಟ್ಟಿ ತಿರುಗುತ್ತಿದ್ದರು. ಇದರಿಂದ ಆತಂಕ ವ್ಯಕ್ತವಾಗಿತ್ತು.

    ಈ ನಡುವೆ ಇಂದು ಅಪಾರ್ಟ್ ನ ಲಿಪ್ಟ್ ನ ಗೊಡೆಗಳಲ್ಲಿ ಉಗಿದಿರುವ ಕುರುಹು ಪತ್ತೆಯಾಗಿದೆ. ಈ ಹಿನ್ನಲೆ ಅಪಾರ್ಟ್  ಮೆಂಟ್ ಅಸೋಶಿಯೇಸನ್ ಅವರು ಸಿಸಿಟಿವಿ ವೀಕ್ಷಿಸಿದಾಗ  ಇಬ್ಬರು ವಿದೇಶಿಗರು ಲಿಪ್ಟ್ ನಲ್ಲಿ  ಮಾಸ್ಕ್ ತೆಗೆದು ತಿರುಗಾಡುತ್ತಿದ್ದು ಕಂಡು ಬಂದಿದೆ. ಅಲ್ಲದೆ ಲಿಪ್ಟ್ ನ ಒಳಗೆ ಉಗಿದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

    ಈ ಹಿನ್ನಲೆ ಅಪಾರ್ಟ್ ಮೆಂಟ್ ನ ಅಸೋಶಿಯೇಷನ್ ಅವರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಆರೋಗ್ಯ ಅಧಿಕಾರಿಗಳು ವಿದೇಶಿಗರನ್ನು ವಶಕ್ಕೆ ತೆಗೆದುಕೊಂಡು ಆರೋಗ್ಯ ಪರೀಕ್ಷೆಗಾಗಿ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ಕರೆದುಕೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *