ಅಂಗಡಿ ಮುಚ್ಚಲು ಬಂದ ಪ್ರತಿಭಟನಾಕಾರರ ಬಾಯಿ ಮುಚ್ಚಿಸಿದ ಅಂಗಡಿ ಮಾಲಿಕ

ಉಡುಪಿ ಜನವರಿ 8: ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ಅಂಗಡಿಯನ್ನು ಮುಚ್ಚಿಸಲು ಬಂದ ಪ್ರತಿಭಟನಾಕಾರರ ವ್ಯಾಪಾರಿಯೊಬ್ಬರು ಓಡಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೈಂದೂರು ತಾಲೂಕು ಗುಜ್ಜಾಡಿಯಲ್ಲಿ ಈ ಘಟನೆ ನಡೆದಿದ್ದು, ರಾಷ್ಟ್ರವ್ಯಾಪಿ ಬಂದ್ ಹಿನ್ನಲೆಯಲ್ಲಿ ಅಂಗಡಿ ಮುಚ್ಚಿಸಲು ಎಡಪಕ್ಷದ ಕಾರ್ಯಕರ್ತರು ಬಂದಾಗ ಅಂಗಡಿ ಮಾಲಿಕ ಕಾರ್ಯಕರ್ತರಿಗೆ ಸರಿಯಾಗಿ ಮಂಗಳಾರತಿ ಮಾಡಿ ಓಡಿಸಿದ್ದಾರೆ.

ಸದ್ಯ ಬಂದ್ ಮಾಡಲು ಬಂದವರ ಮತ್ತು ಮಾಲಕರ ನಡುವಿನ ವಿಡಿಯೋ ವೈರಲ್ ಆಗಿದ್ದು, ರಾಜ್ಯದ ಬಹುತೇಕ ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಅಪ್ಲೋಡ್ ಮಾಡಿದ್ದಾರೆ.

ಮೋದಿ ಪ್ರಧಾನಿಯಾಗಿ ಬಂದ್ರು, ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ನಿಮ್ಮ ಬಂದ್ ಗೆ ನನ್ನ ಸಪೋರ್ಟ್ ಇಲ್ಲ. ನೀವು ಒಳ್ಳೆಯ ವಿಚಾರ ಹಿಡಿದು ಬನ್ನಿ ಅದಕ್ಕೆ ಸಪೋರ್ಟ್ ಮಾಡ್ತೇನೆ. ಮಾಡುವುದಿದ್ದರೆ ಶಬರಿಮಲೆ ವಿಚಾರವಾಗಿ ಹೋರಾಟ ಮಾಡಿ, ಅಲ್ಲಿ ಸಾವಿರ ವರ್ಷ ನೀತಿ ನಿಯಮ ಹಾಳಾಗಿದೆ. ಇದಕ್ಕೆ ನಿಮ್ಮ ಬಳಿ ಉತ್ತರ ಇಲ್ಲ, ಸಾವಿರಾರು ವರ್ಷದಿಂದ ಶಬರಿಮಲೆಯಲ್ಲಿ ಪುಣ್ಯದ ಕೆಲಸ ನಡಿತಾ ಇತ್ತು. ಗಲೀಜು ತಿನ್ನುವವರು, ಕಚಡಾ ತಿನ್ನುವವರು, ಮುಖ್ಯಮಂತ್ರಿ ಮಾಂಸ ತಿಂದು ಹೋಗ್ತೇನೆ ದೇವಸ್ಥಾನಕ್ಕೆ ಅಂದರೆ ಕಮ್ಯುನಿಸ್ಟ್ ನವರದ್ದು ಬಂದ್ ಇಲ್ಲಾ. ಒಳ್ಳೆಯ ಪ್ರಧಾನಮಂತ್ರಿ ಬಂದಾಗ ನಿಮ್ಮದು ಬಂದ್ ಸ್ಟೈಕ್ ಇರುತ್ತೆ. ಯಾವುದು ಮಾನವೀಯತೆ ದೇಶದ ಬಗ್ಗೆ ಚಿಂತೆ ಮಾಡಿ ಮೊದಲು, ಅದು ಮಾನವೀಯತೆ.

ದೇಶ ನಿಮಗೆ ಇಷ್ಟು ಸೌಲಭ್ಯ ನೀಡಿದೆ, ನರೇಂದ್ರ ಮೋದಿ ಸರಕಾರ ಸೌಲಭ್ಯ ನೀಡಿದೆ ಬೆಲೆ ಏರಿಕೆ ವಿಚಾರ 2014 ರ ಲಿಸ್ಟ್ ನೋಡಿ, 2019ರ ಲೀಸ್ಟ್ ನೋಡಿ, ತಾಕತ್ತಿದ್ದರೆ ಎರಡು ಲೀಸ್ಟ್ ಟ್ಯಾಲಿ ಮಾಡಿ ನೋಡಿ. ನಮ್ಮ ದೇಶಕ್ಕೆ ಇಂತಹ ಪ್ರಧಾನಿ ಸಿಗುವುದೆ ಪುಣ್ಯ, ಕೇರಳಕ್ಕೆ ಹೋಗಿ ಸ್ಟೈಕ್ ಮಾಡಿ ಎಂದು ಅಂಗಡಿ ಮಾಲಿಕ ಆಕ್ರೋಶ ವ್ಯಕ್ತಪಡಿಸಿದರು ಅಂಗಡಿ ಮಾಲಿಕನ ಆಕ್ರೋಶಕ್ಕೆ ಪ್ರತಿಭಟನಾಕಾರರು ಸ್ಥಳದಿಂದ ಕಾಲ್ಕಿತ್ತರು.

VIDEO

32 Shares

Facebook Comments

comments