Connect with us

LATEST NEWS

ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ದೇಶಕ್ಕೇ ಮಾರಕ – ಶಕುಂತಲಾ ಶೆಟ್ಟಿ

ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ದೇಶಕ್ಕೇ ಮಾರಕ – ಶಕುಂತಲಾ ಶೆಟ್ಟಿ

ಪುತ್ತೂರು ಜನವರಿ 8: ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ದೇಶಕ್ಕೇ ಮಾರಕ ಎಂದು ಮಾಜಿ ಶಾಸಕಿ, ಕಾಂಗ್ರೇಸ್ ಮುಖಂಡೆ ಶಕುಂತಲಾ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು ಕೇರಳದ ಶಬರಿಮಲೆಯಲ್ಲಿ ಅದರದೇ ಆದ ಕಟ್ಟುಪಾಡುಗಳಿದ್ದು, ಅದರಲ್ಲಿ ಮಹಿಳಾ ಸಮಾನತೆಯ ವಿಚಾರವೇ ಬರುವುದಿಲ್ಲ ಎಂದರು. ಶಬರಿಮಲೆಗೆ ಅದರದೇ ಆದ ವಿಶೇಷತೆಯಿದ್ದು, ಹಿಂದಿನಿಂದಲೂ ಕ್ಷೇತ್ರಕ್ಕೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ನಿಶೇಧವಿದೆ.

ಶಬರಿಮಲೆ ಕ್ಷೇತ್ರಕ್ಕೆ 48 ಕಿಲೋ ಮೀಟರ್ ನಡೆದು ಹೋಗಬೇಕಾದ ಪರಿಸ್ಥಿತಿಯಿದ್ದು, ಅತ್ಯಂತ ಕ್ಲಿಷ್ಟಕರವಾದ ಹಾದಿಯಲ್ಲಿ ಮಹಿಳೆಯರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿಯೂ ಈ ರೀತಿಯ ನಿಶೇಧವಿರುವ ಸಾಧ್ಯತೆಯಿದೆ. ಅಲ್ಲದೆ ದೇಹ ಸಂಬಂಧಿ ಸಮಸ್ಯೆಯಿಂದಲೂ ಮಹಿಳೆಯರಿಗೆ ಶಬರಿಮಲೆಗೆ ನಿಶೇಧವಿದೆ.

ಕ್ಷೇತ್ರದಲ್ಲಿ ಯಾವುದಕ್ಕೆ ಅವಕಾಶ ನೀಡಬೇಕು , ನೀಡಬಾರದು ಎನ್ನುವ ವಿಚಾರ ದೇವಸ್ಥಾನದ ಅರ್ಚಕರು ಹಾಗೂ ಅದಕ್ಕೆ ಸಂಬಂಧಪಟ್ಟವರ ವಿವೇಚನೆಗೆ ಬೀಡಬೇಕಾಗಿರುವುದಾಗಿದೆ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದ ಅವರು ಈ ಬೆಳವಣಿಗೆ ದೇಶಕ್ಕೆ ಮಾರಕ ಎಂದು ಅವರು ಅಭಿಪ್ರಾಯಪಟ್ಟರು.

Facebook Comments

comments