LATEST NEWS
ಅನ್ಯಕೋಮಿನ ಯುವತಿ ಜೊತೆ ಸ್ನೇಹ, ಯುವಕನ ಬರ್ಬರ ಹತ್ಯೆ……….

ಅನ್ಯಕೋಮಿನ ಯುವತಿ ಜೊತೆ ಸ್ನೇಹ, ಯುವಕನ ಬರ್ಬರ ಹತ್ಯೆ……….
ದೆಹಲಿ, ಅಕ್ಟೋಬರ್ 10: ಅನ್ಯಕೋಮಿನ ಯುವತಿಯ ಜೊತೆ ಸ್ನೇಹ ಹೊಂದಿರುವ ಒಂದೇ ಕಾರಣಕ್ಕೆ ಹಿಂದೂ ಯುವಕನೋರ್ವನನ್ನು ಹೊಡೆದು ಕೊಂದ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಜಹಂಗೀಪುರದ ಯುವತಿಯ ಜೊತೆ ರಾಹುಲ್ ಎನ್ನುವ ಯುವಕ ಗೆಳೆತನ ಹೊಂದಿದ್ದ ಎನ್ನಲಾಗಿದೆ.

ಈ ಕಾರಣಕ್ಕಾಗಿಯೇ ಯುವತಿಯ ಕಡೆಯ ಮಂದಿ ರಾಹುಲ್ ನನ್ನು ಹೊಡೆದು ಕೊಂದಿದ್ದು, ಗಂಭೀರವಾಗಿ ಗಾಯಗೊಂಡ ರಾಹುಲ್ (18) ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ರಾಹುಲ್ ಕೊಲೆ ಹಿನ್ನಲೆಯಲ್ಲಿ ದೆಹಲಿ ಪೋಲೀಸರು ಮಹಮ್ಮದ್ ರಾಝ್ , ಮನ್ವಾರ್ ಹುಸೇನ್ ಹಾಗೂ ಮೂವರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ.
ಅನ್ಯಕೋಮಿನ ಯುವತಿಯೊಂದಿಗೆ ಸ್ನೇಹ ಹೊಂದಿದ್ದೇ ಈ ಯುವಕನ ಕೊಲೆಗೆ ಪ್ರಮುಖ ಕಾರಣವಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಉತ್ತರ ವಲಯ ಡಿ.ಸಿ.ಪಿ. ವಿಜಯಾಂತ ಆರ್ಯ ಇದೊಂದು ಎರಡು ಕುಟುಂಬಗಳ ನಡುವಿನ ವೈಮನಸ್ಸಾಗಿದ್ದು, ಇದಕ್ಕೆ ಯಾವುದೇ ಬಣ್ಣ ನೀಡಬಾರದು ಎಂದು ಮನವಿ ಮಾಡಿದ್ದಾರೆ