Connect with us

LATEST NEWS

ಮುಂದಿನ ಎರಡು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆ..

ಮುಂದಿನ ಎರಡು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆ..

ನವದೆಹಲಿ : ಇನ್ನೆರಡು ದಿನ ಕರ್ನಾಟಕದ ಒಳನಾಡು, ತೆಲಂಗಾಣ ಮತ್ತು ಪೂರ್ವ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಉತ್ತರ ಅಂಡಮಾನ್‌ ಸಮುದ್ರ, ಬಂಗಾಲ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದು, ಅ. 10ರಂದು ಚಂಡಮಾರುತವಾಗಿ ಪರಿ ವರ್ತನೆಯಾಗುವ ಸಾಧ್ಯತೆ ಯಿದೆ. ಇದು ಮತ್ತಷ್ಟು ಬಲಗೊಂಡು ಪೂರ್ವ ಕರಾವಳಿಗೆ ಅಪ್ಪಳಿಸಲಿದೆ ಎಂದು ಇಲಾಖೆ ತಿಳಿಸಿದೆ.

ಕರ್ನಾಟಕದ ಒಳ ನಾಡು, ಒಡಿಶಾ, ಆಂಧ್ರ ಕರಾವಳಿ, ತೆಲಂಗಾಣ, ರಾಯಲ ಸೀಮಾ, ಮರಾಠವಾಡಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಯಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಶುಕ್ರವಾರದಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Facebook Comments

comments