LATEST NEWS
ಬಶೀರ್ ಹತ್ಯೆಯನ್ನು ಸಮರ್ಥಿಸಿಕೊಂಡ ವಿಶ್ವಹಿಂದೂ ಪರಿಷತ್

ಬಶೀರ್ ಹತ್ಯೆಯನ್ನು ಸಮರ್ಥಿಸಿಕೊಂಡ ವಿಶ್ವಹಿಂದೂ ಪರಿಷತ್
ಮಂಗಳೂರು ಜನವರಿ 28: ಇತ್ತೀಚೆಗೆ ದೀಪಕ್ ರಾವ್ ಹತ್ಯೆ ದಿನ ನಡೆದ ಬಶೀರ್ ಹತ್ಯೆಯನ್ನು ವಿಶ್ವಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಸಮರ್ಥಿಸಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಹಡೆದವ್ವನ ಶಾಪ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಶತ್ ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅಮಾಯಕ ದೀಪಕ್ ರಾವ್ ಅವರನ್ನು ಹತ್ಯೆ ಮಾಡಲಾಗಿದ್ದು, ಈ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆಯಾಗಿದೆ ಎಂದು ಹೇಳಿದರು. ಬಶೀರ್ ಹತ್ಯೆಯಾಗಿದ್ದಕ್ಕೆ ನಮಗೇನೂ ಚಿಂತೆಯಿಲ್ಲ ಎಂದು ಹೇಳಿದ ಅವರು ವಿಎಚ್ ಪಿ ಅಧ್ಯಕ್ಷ ನಾಗಿ ಇದನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದರು.

ಒಂದು ಕೊಲೆಗೆ ಪ್ರತೀಕಾರಕ್ಕಾಗಿ ಮುಗ್ಧ ಹಿಂದೂಗಳ ಹತ್ಯೆಯಾಗಬೇಕಾದ್ರೆ ಬಶೀರ್ ಹತ್ಯೆ ಮಾಡ್ಬಾರ್ದಾ? ಎಂದು ಪ್ರಶ್ನೆ ಮಾಡಿದ್ದಾರೆ.