Connect with us

LATEST NEWS

ಮಹಾತ್ಮಾ ಗಾಂಧಿ ಹತ್ಯೆಯನ್ನು ಸಮರ್ಥಿಸಿದ ಹಿಂದೂ ಮಹಾಸಭಾ

ಮಹಾತ್ಮಾ ಗಾಂಧಿ ಹತ್ಯೆಯನ್ನು ಸಮರ್ಥಿಸಿದ ಹಿಂದೂ ಮಹಾಸಭಾ

ಮಂಗಳೂರು ಜನವರಿ 28: ದೇಶದ ವಿಭಜನೆಗೆ ಕಾರಣವಾಗಿ, ಪಾಕಿಸ್ತಾನದ ಮುಸ್ಲಿಮರ ಪರ ನಿಂತಿದ್ದ ಮಹಾತ್ಮಾಗಾಂಧಿ ಅವರ ಕೊಲೆ ಅನಿವಾರ್ಯವಾಗಿತ್ತು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ನಾ.ಸುಬ್ರಹ್ಮಣ್ಯ ರಾಜು ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಹಲವರ ರಕ್ತದ ಓಕುಳಿ ನಿಲ್ಲಬೇಕಾಗಿದ್ದರೆ ಆ ವ್ಯಕ್ತಿ ಕೊಲೆ ಆಗಲೇ ಬೇಕಿತ್ತು ಎಂಬ ನಿರ್ಧಾರಕ್ಕೆ, ಬಹಳ ಅಧ್ಯಯನದ ಬಳಿಕ ಮಹಸಭಾ ಬಂದಿದೆ. ಹಾಗಾಗಿಯೇ ನಾವು ಗಾಂಧಿ ಹಂತಕ ನಾಥುರಾಮ್‌ ಗೋಡ್ಸೆಯನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದರು.

ಒಬ್ಬ ವ್ಯಕ್ತಿ ಸಮಾಜ ಕಂಕಟನಾಗಿ ಅವನಿಂದ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ ಎಂದಾದ ಮೆಲೆ ಅವನನ್ನು ಆಸಮಾಜದಿಂದ ಬೇರ್ಪಡಿಸಿ ತಕ್ಕ ಶಿಕ್ಷೆ ಕೊಡಬೇಕಾಗಿರುವುದು ನಮ್ಮಧರ್ಮ. ಗೋಡ್ಸೆ ಕಾನೂನು ಕೈಗೆತ್ತಿಕೊಂಡಿರುವುದಕ್ಕೆ ಶಿಕ್ಷೆ ಆಗಿದೆ. ಗೋಡ್ಸೆಯನ್ನು ನಾವು ಸಮರ್ಥಿಸುವುದು ಸತ್ಯ. ಅದರಲ್ಲಿ ಮುಚ್ಚುಮರೆ ಇಲ್ಲ ಆ ಹತ್ಯೆ ನಮಗೋಸ್ಕರ ಮಾಡಿರುವುದು. ಅವರ ಸ್ವಾರ್ಥಕ್ಕಲ್ಲ. ಗೋಡ್ಸೆಯನ್ನು ಬಿಟ್ಟು ಕೊಟ್ಟರೆ ನಾವು ಮೋಸ ಮಾಡಿದಂತಾಗುತ್ತದೆ ಎಂದು ನಾ.ಸುಬ್ರಹ್ಮಣ್ಯ ಹೇಳಿದರು.

ಭಾರತದ ವಿಭಜನೆ ವೇಳೆ ಹಿಂದು ಧರ್ಮಕ್ಕೆ ಬಿಟ್ಟರೆ ಬೇರೆ ಯಾರಿಗೂ ಅನ್ಯಾಯ ಆಗಿಲ್ಲ. ಗಾಂಧಿ ನಡವಳಿಕೆಗಳೇ ದೇಶದ ವಿಭಜನೆಗೆ ಕಾರಣ. ಈ ಕಾರಣಕ್ಕಾಗಿ ಗೋಡ್ಸೆಯನ್ನು ಹಿಂದುಮಹಾಸಭಾ ಗೌರವಯುತವಾಗಿ ಕಾಣುತ್ತದೆ. ಗಾಂಧಿ ಅವರನ್ನು ಗೌರವದಿಂದ ಮಹಾತ್ಮ ಎಂದ ಕರೆದ ಪಕ್ಷವೂ ನಮ್ಮದು ಎಂದು ಅವರು ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *