Connect with us

FILM

ಮಲೆಯಾಳಂನ ಖ್ಯಾತ ನಟ ಮೋಹನ್ ರಾಜ್ ನಿಧನ

ಕೇರಳ ಅಕ್ಟೋಬರ್ 05: ಮಲೆಯಾಳಂನ ಖ್ಯಾತ ನಟ ಮೋಹನ್ ರಾಜ್ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು, ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಿರುವನಂತಪುರಂ ಬಳಿಯ ಕಂಜಿರಾಂಕುಳಂನ ತಮ್ಮ ಮನೆಯಲ್ಲಿ ಶುಕ್ರವಾರ ನಿಧನರಾದರು ಎಂದು ವರದಿಗಳು ತಿಳಿಸಿವೆ.


1955 ರಲ್ಲಿ ತಿರುವನಂತಪುರದಲ್ಲಿ ಜನಿಸಿದ್ದ ಮೋಹನ್ ರಾಜ್ ಭಾರತೀಯ ಸೇನೆ ಸೇರಿದ್ದರು. ಗಾಯದಿಂದ ಕೆಲ ವರ್ಷಗಳ ಬಳಿಕ ಸೇನೆ ತೊರೆದು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿಕೊಂಡು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. 1988 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದ ಮೋಹನ್ ರಾಜ್ ಅವರು 1989 ರಲ್ಲಿ ತೆರೆ ಕಂಡಿದ್ದ ಮೋಹನ್ ಲಾಲ್ ಅಭಿನಯದ ‘ಕಿರೀಡಂ’ ಮಲಯಾಳಂ ಸಿನಿಮಾದಲ್ಲಿ ‘ಕಿರಿಕಾದನ್ ಜೋಸ್’ ಹೆಸರಿನ ಖಳನಟನಾಗಿ ಮಿಂಚಿದ್ದರು.

ಮೋಹನ್ ರಾಜ್ ಅವರ ನಿಧನಕ್ಕೆ ಸಿ.ಎಂ ಪಿಣರಾಯಿ ವಿಜಯನ್, ನಟರಾದ ಮೋಹನ್ ಲಾಲ್, ಮುಮ್ಮುಟ್ಟಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಲಯಾಳಂ ಸೇರಿದಂತೆ ತೆಲುಗು, ತಮಿಳಿನ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೋಹನ್ ರಾಜ್ ನಟಿಸಿದ್ದರು. ಖಳನಟರಾಗಿ ಅವರು ಹೆಚ್ಚು ಗುರುತಿಸಿಕೊಂಡಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *