Connect with us

    LATEST NEWS

    ಛತ್ತಿಸ್‌ಗಡ : ಬಸ್ತರ್‌ ಎನ್ ಕೌಂಟರ್, 36 ನಕ್ಸಲರ ಹತ್ಯೆ..!

    ರಾಂಚಿ:  ಛತ್ತಿಸ್ ಗಢದ ಬಸ್ತರ್  ಅಭುಜ್ ಮರ್ ಕಾಡಿನಲ್ಲಿ ನಡೆದ ಎನ್‌ಕೌಂಟರಿನಲ್ಲಿ 36 ಜನ ನಕ್ಸಲರು ಹತರಾಗಿದ್ದಾರೆ.  10 ಕಿಲೋಮೀಟರ್ ವ್ಯಾಪ್ತಿಯ ಕಾಡಲ್ಲಿ ಶುಕ್ರವಾರ ನಡೆದ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ 36 ಮಂದಿ ನಕ್ಸಲರು ಹತ್ಯೆಗೀಡಾಗಿದ್ದಾರೆ.

    ಹತ್ಯೆಯಾದವರಲ್ಲಿ ಐದು ಮಂದಿ ಹಿರಿಯ ಕಮಾಂಡರ್ ಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಬಸ್ತರ್ ನಲ್ಲಿ ನಕ್ಸಲೀಯರ ಮೇಲೆ ನಡೆಸಿದ ಅತಿದೊಡ್ಡ ಪ್ರಹಾರ ವಾಗಿದೆ.  ಏಪ್ರಿಲ್ 16ರಂದು ನಡೆದ ಗುಂಡಿನ ಕಾಳಗದಲ್ಲಿ 29 ಮಂದಿಯನ್ನು ಹತ್ಯೆ ಮಾಡಿದ್ದಕ್ಕಿಂತಲೂ ದೊಡ್ಡ ಕಾಳಗ ಇದಾಗಿದೆ. ಕತ್ತಲು ಆಗಿರುವುದರಿಂದ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಜಾಗರೂಕವಾಗಿ ಸ್ವಚ್ಛಗೊಳಿಸುತ್ತಿದ್ದಾರೆ. ನಕ್ಸಲರ ಮೃತದೇಹಗಳನ್ನು ಸಂಗ್ರಹಿಸಲು ಕೆಲ ಕಾಲ ಹಿಡಿಯಬಹುದು. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಇಲ್ಲಿ ಕನಿಷ್ಠ 50 ಮಂದಿ ನಕ್ಸಲರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಈ ದಾಳಿ ನಡೆದಿತ್ತು. ಸುಮಾರು 10 ಕಿಲೋಮೀಟರ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಗುಂಡಿನ ಚಕಮಕಿ ನಡೆದಿದೆ. ಮಧ್ಯಾಹ್ನ 1 ರಿಂದ ರಾತ್ರಿ 9ರವರೆಗೆ ನಿರಂತರ ಗುಂಡಿನ ಕಾಳಗ ನಡೆದಿದೆ. ಇದು ಅತ್ಯಂತ ಕೆಚ್ಚಿನ ಕಾರ್ಯಾಚರಣೆ ಎಂದು ನಾರಾಯಣಪುರ ಎಸ್ಪಿ ಪ್ರಭಾತ್ ಸಿಂಗ್ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply