LATEST NEWS
ರಾಷ್ಟ್ರ ವಿರೋಧಿ ಕೃತ್ಯಗಳನ್ನು ಸಹಿಸಲಾಗದು – ಶಾಸಕ ಕಾಮತ್
ಮಂಗಳೂರು ನವೆಂಬರ್ 27: ಮಂಗಳೂರಿನ ಬಿಜೈ ಪರಿಸರದಲ್ಲಿ ಕಟ್ಟಡದ ಕಾಂಪೌಂಡ್ ನಲ್ಲಿ ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್ ಪರ ಬರಹಗಳು ಕಂಡು ಬಂದಿರುವ ವಿಚಾರಕ್ಕೆ ಸಂಬಂಧಿಸಿ ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಕಾಮತ್, ಮಂಗಳೂರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಪರವಾಗಿ ಕಂಡು ಬಂದಿರುವ ಗೋಡೆ ಬರಹವು ಆತಂಕಕಾರಿಯಾಗಿದೆ. ಇಂತಹ ರಾಷ್ಟ್ರ ವಿರೋಧಿ ಕೃತ್ಯಗಳನ್ನು ಸಹಿಸಲಾಗದು ಎಂದರು.
ಈ ವಿಚಾರವಾಗಿ ಈಗಾಗಲೇ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಜರಗಿಸಲು ಸೂಚನೆ ನೀಡಿದ್ದೇನೆ. ಇಂತಹ ಮನಸ್ಥಿತಿಯನ್ನು ಮೊಳಕೆಯಲ್ಲೇ ಚಿವುಟದಿದ್ದರೆ ಭಯೋತ್ಪಾದನಾ ಚಟುವಟಿಕೆಯ ಬೇರು ಮತ್ತಷ್ಟು ಆಳಕ್ಕೆ ಹೋಗಬಹುದು ಎಂದರು.
Facebook Comments
You may like
-
ರಾಷ್ಟ್ರೀಯ ಯುವ ದಿನ: ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ವಾಕ್ಥಾನ್
-
ಧಾರ್ಮಿಕ ಭಾವನೆ ಕೆರಳಿಸುವ ಕೃತ್ಯ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ – ಶಾಸಕ ವೇದವ್ಯಾಸ್ ಕಾಮತ್
-
ವಿವಾದಾತ್ಮಕ ಗೋಡೆ ಬರಹ ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು
-
ಮೀನುಗಾರಿಕಾ ದೋಣಿ ದುರಂತ – ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ
-
ರಥಬೀದಿ ರಸ್ತೆಯಲ್ಲಿ ನಾಳಿನಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು – ಶಾಸಕ ಕಾಮತ್
-
ಲಷ್ಕರ್, ತಾಲಿಬಾನ್ ಪರ ಗೋಡೆ ಬರಹ, ಬಿಜೆಪಿಯ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ : ಡಿವೈಎಫ್ಐ
You must be logged in to post a comment Login