ಹುಟ್ಟು ಹಬ್ಬದ ಸಂಭ್ರಮದಲ್ಲಿ ಮಕ್ಕಳೊಂದಿಗೆ ಮಗುವಾದ ಶಾಸಕ ವೇದವ್ಯಾಸ್ ಕಾಮತ್ 

ಮಂಗಳೂರು, ಡಿಸೆಂಬರ್ 07: ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

ಶಾಸಕರು ಯಾವುದೇ ಆಡಂಬರ , ಗೌಜಿ ಗದ್ದಲಗಳಿಲ್ಲದೆ ತಮ್ಮ 42 ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ.ಮಂಗಳೂರು ನಗರದ ಜೆಪ್ಪು ಮಾರ್ಕೆಟ್ ಸಮೀಪದ ಭಗಿನಿ ಸಮಾಜದ ಪುಟ್ಟ ಮಕ್ಕಳೊಂದಿಗೆ ಆಚರಿಸಿದರು.

ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ಒತ್ತಡಗಳ ನಡುವೆ ಇಂದು ಬೆಳಗ್ಗೆ ಆಶ್ರಮಕ್ಕೆ ಭೇಟಿ ನೀಡಿದ ಶಾಸಕರು ಪುಟ್ಟ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಕೆಲ ಕಾಲ ಕಳೆದರು.

ಈ ಸಂದರ್ಭದಲ್ಲಿ ಮಕ್ಕಳು ಸಹ ಶಾಸಕರಿಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು.

ಈ ಮೂಲಕ ಶಾಸಕ ವೇದವ್ಯಾಸರು ಮತ್ತೆ ತನ್ನ ಸರಳತೆಯನ್ನು ತೋರಿಸಿದ್ದಾರೆ.

4 Shares

Facebook Comments

comments