Connect with us

    LATEST NEWS

    ಪಲಿಮಾರು ಪರ್ಯಾಯದಲ್ಲಿ ಗ್ಯಾಸ್, ಸ್ಟೀಮ್ ಅಡುಗೆ ಮೈಲಿಗೆಯಂತೆ

    ಉಡುಪಿ, ಸೆಪ್ಟೆಂಬರ್ 10 : ಶ್ರೀ ಕೃಷ್ಣನ ನಾಡು ಉಡುಪಿಯ ಕೃಷ್ಣ ಮಠ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಸುದ್ದಿಯಾಗಿರುವುದು ಪಲಿಮಾರು ಮಠ. ಈ ಬಾರಿ ಪರ್ಯಾಯದ ಗದ್ದುಗೆ ಏರಲಿರುವ ಪಲಿಮಾರು ಮಠಕ್ಕೆ ಗ್ಯಾಸ್, ಸೌರ ಒಲೆ ಅಥವಾ ಸ್ಟೀಮ್ ನಲ್ಲಿ ಮಾಡಿದ ಅಡುಗೆ ಮೈಲಿಗೆಯಂತೆ. ಆದ್ದರಿಂದ ಪಲಿಮಾರು ಮಠದ ಪರ್ಯಾಯದಲ್ಲಿ ದೇವಾಳಕ್ಕೆ ಬರುವ ಭಕ್ತರಿಗೆ ಕಟ್ಟಿಗೆ ಒಲೆಯಲ್ಲೇ ಅಡುಗೆ ತಯಾರಿಸಿ ಭಕ್ತರಿಗೆ ಬಡಿಸಲು ಸಿದ್ದತೆಗಳು ಆರಂಭವಾಗಿವೆ. ಇದಕ್ಕೆ ಪಲಿಮಾರು ಮಠಾಧೀಶರು ಸಮ್ಮತಿಸಿದ್ದಾರೆ ಎನ್ನಲಾಗಿದೆ.
    ಗ್ಯಾಸ್ ಅಥವಾ ಸ್ಟೀಮ್ ನಲ್ಲಿ ಅಡುಗೆ ಮಾಡಿದರೆ ಮಡಿಗೆ ಭಂಗ ಬರುತ್ತದೆ. ಶಾಸ್ತ್ರದ ಪ್ರಕಾರ ಇದು ತಂಗಳನ್ನವಾಗುತ್ತದೆ ಎಂದು ಮಡಿವಂತ ಪಂಡಿತರು ಉಡುಪಿಯ ಶ್ರೀಕೃಷ್ಣ ಮಠದ ಭಾವಿ ಪರ್ಯಾಯ ಪೀಠಾಧೀಶ ಪಲಿಮಾರ್ ಸ್ವಾಮೀಜಿಗೆ ಒತ್ತಡ ಹೇರಿರುವುದೇ ಇದಕ್ಕೆಲ್ಲ ಕಾರಣವಾಗಿದೆ.
    25 ವರ್ಷಗಳ ಹಿಂದೆ ಅದಮಾರು ಮಠಾಧೀಶರ ನೇತೃತ್ವದಲ್ಲಿ ಭೋಜನ ಶಾಲೆ ನವೀಕರಣಗೊಂಡಿತ್ತು. ಈ ಸಂದರ್ಭದಲ್ಲಿ ಸ್ಟೀಮ್ ಮೂಲಕ ಅಡುಗೆ ಪ್ರಾರಂಭಿಸಲಾಗಿತ್ತು. ಈ ಸ್ಟೀಮ್ ಅಡುಗೆ ಮಾಟಲು ಕಡಿಮೆ ಪ್ರಮಾಣದ ಕಟ್ಟಿಗೆ ಸಾಕಿತ್ತು. ಕಟ್ಟಿಗೆಯ ಕೊರತೆ, ಪರಿಸರ ನಾಶ ಹಾಗೂ ಪರಿಸರ ಸ್ನೇಹಿಯಾದ ಇದು ಕಳೆದ ಎರಡುವರೆ ದಶಕಗಳಿಂದ ನಡೆದು ಬಂದಿದೆ.

    ಅಷ್ಟ ಮಠದ ಅನೇಕ ಸ್ವಾಮೀಜಿಗಳು ಪರ್ಯಾಯ ಪೀಠ ಏರಿ ಇಳಿದಿದ್ದಾರೆ ಆದರೂ ಯಾರು ಕೂಡ ಇದರ ಬಗ್ಗೆ ಚಕಾರ ವೆತ್ತಿಲ್ಲ ಆದರೆ ಈ ಬಾರಿ ಏಕಾಏಕಿ ಈ ಮಡಿವಂತಿಗೆ ಮಠದಲ್ಲಿ ಬಂದು ಬಿಟ್ಟಿದೆ.
    ಪ್ರತದಿನ ಸಾವಿರಾರು ಭಕ್ತರು ಉಡುಪಿ ಕೃಷ್ಣನ ದರ್ಶನಕ್ಕೆ ಮಠಕ್ಕೆ ಬರುತ್ತಿದ್ದಾರೆ. ಬಂದ ಭಕ್ತರಿಗೆ ಮದ್ಯಾಹ್ನದ ಊಟವನ್ನು ಪ್ರಸಾದದ ರೂಪದಲ್ಲಿ ಬಡಿಸಲಾಗುತ್ತಿತ್ತು. ಇದಕ್ಕಾಗಿ ಅಡುಗೆ ತಯಾರಿಸುವ ಭಾರಿ ವ್ಯವರ್ಸತೆ ಕೂಡ ಮಠದಲ್ಲಿ ಅಳವಡಿಕೆ ಮಾಡಲಾಗಿದೆ.

    ಈ ಬಾರಿ ಪಲಿಮಾರು ಪರ್ಯಾಯದ ಸಂದರ್ಭ ಭೋಜನ ಶಾಲೆ ಅಡುಗೆ ವ್ಯವಸ್ಥೆ ಆಧುನೀಕರಣಗೊಳಿಸಲು ವಿದ್ವಾಂಸರು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಭೋಜನ ಶಾಲೆ ಮೇಲ್ಭಾಗದಲ್ಲಿ ಸೌರ ವಿದ್ಯುತ್ ಚಾವಣಿ ನಿರ್ಮಿಸಲು ಸಲಹೆ ನೀಡಿದ್ದರು. ಇದರೊಂದಿಗೆ ಗ್ಯಾಸ್ ಉಳಿತಾಯದೊಂದಿಗೆ, ಪರಿಸರ ರಕ್ಷಣೆಯ ಕಾರ್ಯವೂ ಆಗುತ್ತದೆ ಎಂಬುವುದು ವಿದ್ವಾಂಸರ ಯೋಚನೆ. ಸೋಲಾರ್ ವ್ಯವಸ್ಥೆಯ ಯೋಜನೆ ಪಲಿಮಾರು ಸ್ವಾಮೀಜಿ ಅವರಿಗೂ ಹಿಡಿಸಿತ್ತು. ಇದಕ್ಕೆ ಬೇಕಾದ ಸಿದ್ದತೆಗಳನ್ನು ನಡೆಸಿದ್ದರು.

    ಸ್ವಾಮೀಜಿ ಅವರ ಈ ವಿಚಾರ ಮಡಿವಂತ ಸಾಂಪ್ರದಾಯವಾದಿ ವಿದ್ವಾಂಸರಿಗೆ ಅಪ್ರೀಯ ಕಂಡಿದೆ. ಯಾತ್ರಾರ್ಥಿಗಳು ಊಟ ಮಾಡುವ ಭೋಜನ ಶಾಲೆ ಅಡುಗೆಯನ್ನೂ ಕಟ್ಟಿಗೆ ಒಲೆಯಲ್ಲಿ ಮಾಡಬೇಕು ಎಂದು ಶಾಸ್ತ್ರಗಳನ್ನು ಉದಾಹರಿಸಿ ಪಟ್ಟು ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಮಠದಲ್ಲಿ ಗ್ಯಾಸ್, ಸೌರ ಶಕ್ತಿ ಬಳಸಿ ಅಡುಗೆ ಮಾಡಿದರೆ ಮೈಲಿಗೆ ಆಗುತ್ತದೆ ಎಂದು ತಕರಾರು ಬೇರೆ ತೆಗೆದಿದ್ದಾರೆ.
    ಅಂತಿಮ ನಿರ್ಧಾರ ಆಗಿಲ್ಲ,ಪಲಿಮಾರು ಮಠ ಸ್ಪಷ್ಟನೆ:
    ಪಲಿಮಾರು ಪರ್ಯಾದ ಸಂದರ್ಭ ಭೋಜನಶಾಲೆ ಸಹಿತ ಎಲ್ಲೆಡೆ ಕಟ್ಟಿಗೆ ಒಲೆ ಮೂಲಕವೇ ಅಡುಗೆ ತಯಾರಿ ನಡೆಯಲಿದೆ. ನಿತ್ಯವೂ ಕಟ್ಟಿಗೆ ಒಲೆ ಬಳಸುವ ಚಿಂತನೆ ಇದೆ. ಆದರೆ ಇದಕ್ಕೆ ನುರಿತ ಅಡುಗೆಯವರು ಬೇಕಾಗುತ್ತಾರೆ. ಒಮ್ಮೆ ಆರಂಭಿಸಿದ ಬಳಿಕ ಮುಂದಿನ ಪರ್ಯಾಯದ ಅವಧಿ ವರೆಗೂ ಕಟ್ಟಿಗೆ ಬಳಸಿ ಅಡುಗೆ ತಯಾರು ಮಾಡುವುದು ಕಷ್ಟಸಾಧ್ಯ.

    ಈ ಕುರಿತು ಅಂತಿಮ ತೀರ್ಮಾನ ಆಗಿಲ್ಲ. ಆದರೆ ಮಡಿವಂತ ಯಾತ್ರಾರ್ಥಿಗಳು ಬರುವುದರಿಂದ ಇದಕ್ಕೆ ಕಟ್ಟಿಗೆಯಿಂದಲೇ ಅಡುಗೆ ಮಾಡುವ ಕುರಿತು ತೀರ್ಮಾನಿಸಲಾಗಿದ್ದು, ಕಟ್ಟಿಗೆ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಮಠದ ವಕ್ತಾರ ಶ್ರೀಶ ಆಚಾರ್.

    ವಾರ್ಷಿಕ 10 ಎಕರೆ ಕಾಡು ನಾಶ:
    ಉಡುಪಿ ಶ್ರೀ ಕೃಷ್ಣನ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಪ್ರತಿ ದಿನ ಹತ್ತು ಸಾವಿರ ಮಂದಿ ಊಟ ತಯಾರು ಮಾಡಲು ಸ್ಟೀಮ್ ಅಡುಗೆಯಾದರೆ ಸ್ಟೀಮ್ ಉತ್ಪತ್ತಿ ಮಾಡುವ ಬಾಯ್ಲರಿಗೆ ಉರುವಲಾಗಿ ತಿಂಗಳಿಗೆ 6 ಟನ್ ಕಟ್ಟಿಗೆ ಬೇಕು. ಅದನ್ನೇ ಬೆಂಕಿ ಒಲೆಯಲ್ಲಿ ಮಾಡಲು 24 ಟನ್ ಕಟ್ಟಿಗೆ ಬೇಕಾಗುತ್ತದೆ.

    ವರ್ಷಕ್ಕೆ ಅಂದಾಜು 300 ಟನ್ ಕಟ್ಟಿಗೆ ಬೇಕು.ಇದರಿಂದ ವರ್ಷಕ್ಕೆ 10 ಎಕರೆ ಕಾಡು ನಾಶ ಮಾಡಬೇಕಾಗುತ್ತದೆ. ಬೆಂಕಿ ಒಲೆ ಸುರಕ್ಷಿತವೂ ಅಲ್ಲ, ನಿತ್ಯ ರಾಶಿಗಟ್ಟಲೆ ಶೇಖರಣೆಯಾಗುವ ಮಸಿಯ ವಲೆವಾರಿಯೂ ಕಷ್ಟ ಸಾಧ್ಯ, ಇದರಿಂದ ಸ್ವಚ್ಛತೆಗೂ ಸಮಸ್ಯೆ. ಒಟ್ಟರೆಯಾಗಿ ಪಲಿಮಾರು ಪರ್ಯಾಯದ ಕಾಲದಲ್ಲೇ ಇದಕ್ಕೆ ಉತ್ತರ ಸಿಗಬಹುದು.

    Share Information
    Advertisement
    Click to comment

    You must be logged in to post a comment Login

    Leave a Reply