Connect with us

DAKSHINA KANNADA

ಕೋಟಿ ಚೆನ್ನಯ್ಯ ತಾಯಿಗೇ ಅವಮಾನ : ವ್ಯಾಪಕ ಖಂಡನೆ

ಪುತ್ತೂರು,ಸೆಪ್ಟಂಬರ್ 10: ತುಳುನಾಡಿನ ಕಾರ್ಣಿಕ ಪುರುಷರು ಹಾಗೂ ವೀರ ಪುರುಷರಾದ ಕೋಟಿ-ಚೆನ್ನಯ್ಯ ರ ಜನ್ಮಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ತಾಯಿ ದೈಯಿ ಬೈದೆದಿಗೆ ಅವಮಾನ ಮಾಡಿದ ಘಟನೆ ವರದಿಯಾಗಿದೆ. ಇಲ್ಲಿನ ಔಷಧೀಯ ವನದಲ್ಲಿ ಯುವಕನೋರ್ವ ಅನಾಗರಿಕನಂತೆ ವರ್ತಿಸಿದ್ದು ಮಾತ್ರವಲ್ಲ ಆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಈಶ್ವರಮಂಗಲದ ನಿವಾಸಿ ಹನೀಫ್ ಎನ್ನುವ ಯುವಕ ಅರಣ್ಯ ಇಲಾಖೆಯು ನಿರ್ಮಿಸಿರುವ ಔಷಧೀಯ ವನದಲ್ಲಿ ನಿರ್ಮಿಸಿರುವ ದೇಯಿ ಬೈದೆದಿಯ ಪುತ್ಥಳಿಯ ಪಕ್ಕದಲ್ಲಿ ಕೂತು ಪುತ್ಥಳಿಯ ಎದೆಯನ್ನು ಮುಟ್ಟುವ ಅನಾಗರಿಕ ವರ್ತನೆಯನ್ನು ತೋರಿದ್ದಾನೆ ಹಾಗೂ ಆ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.

ಕೋಟಿ-ಚೆನ್ನಯ್ಯರ ಜನ್ಮಸ್ಥಳವಾದ ಪಡುಮಲೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸುಮಾರು 5 ಕೋಟಿ ರೂಪಾಯಿಗಳನ್ನು 4 ವರ್ಷಗಳ ಹಿಂದೆಯೇ ಬಿಡುಗಡೆ ಮಾಡಿದೆ. ಇದರ ಜೊತೆಗೆ ಅರಣ್ಯ ಇಲಾಖೆಯ ತನ್ನ ಸ್ವ ಇಚ್ಛೆಯಿಂದ ಪಡುಮಲೆಯಲ್ಲಿ ದೇಯಿ ಬೈದೆದಿ ಔಷಧೀಯ ವನಗಳ ಪಾರ್ಕ್ ನ್ನು ನಿರ್ಮಾಣ ಮಾಡಿದೆ.

ದೇಯಿಬೈದೆದಿ ಆಗಿನ ಕಾಲದ ಪ್ರಸಿದ್ಧ ನಾಟಿ ವೈದ್ಯೆಯಾಗಿದ್ದ ಹಿನ್ನಲೆಯಲ್ಲಿ ಈ ಪಾರ್ಕನ್ನು ಪಡುಮಲೆಯಲ್ಲಿ ಮಾಡಲಾಗಿದೆ. ಆದರೆ ಸಮರ್ಪಕವಾದ ನಿರ್ವಹಣೆ ಹಾಗೂ ಸೆಕ್ಯುರಿಟಿ ವ್ಯವಸ್ಥೆಯಿಲ್ಲದ ಕಾರಣ ಹನೀಫ್ ನಂತಹ ಕಿಡಿಗೇಡಿಗಳು ಈ ಪಾರ್ಕನ್ನು ತಮ್ಮ ಕುಚೇಷ್ಟೆಗಳ ತಾಣವನ್ನಾಗಿ ಮಾಡುತ್ತಿದ್ದಾರೆ.

ವ್ಯಾಪಕ ಖಂಡನೆ:

ಹನೀಫ್ ತೆಗೆಸಿಕೊಂಡಿರುವ ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹನೀಫ್ ವಿರುದ್ದ ಜಾತಿ ಧರ್ಮ ಬಿಟ್ಟು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಮುಖವಾಗಿ ಬಿಲ್ಲವ ಸಂಘಟನೆಗಳು ಈ ದುಷ್ಕೃತ್ಯವನ್ನು ತೀವೃವಾಗಿ ಖಂಡಿಸಿದ್ದು ಈತನ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿವೆ.

 

Share Information
Advertisement
Click to comment

You must be logged in to post a comment Login

Leave a Reply