Connect with us

LATEST NEWS

ಉತ್ತರಾಖಂಡ್‌ ಹಿಮಗಡ್ಡೆ ಸಿಡಿದು ಜಲ ಪ್ರಳಯ: 150 ಮಂದಿ ನಾಪತ್ತೆ…!!

ಉತ್ತರಾಖಂಡ್ ಫೆಬ್ರವರಿ 7: ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಜೋಶೀಮಠದ ಬಳಿ ಇಂದು ಬೆಳಗ್ಗೆ ಹಿಮಗಡ್ಡೆ ಸಿಡಿದ ಪರಿಣಾಮ ಜಲಪ್ರಳಯ ಉಂಟಾಗಿದ್ದು, ಈ ಪ್ರಳಯಕ್ಕೆ ಸುಮಾರು 150ಕ್ಕೂ ಅಧಿಕ ಮಂದಿ ನಾಪತ್ತೆ ಅಥವಾ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ.


ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಸ್ಫೋಟಗೊಂಡಿದ್ದು, ಹಿಮನದಿ ಸ್ಪೋಟದಿಂದಾಗಿ ಧೌಲಿಗಂಗಾ ನದಿಯಲ್ಲಿನ ಹಿಮದ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಪರಿಣಾಮ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಹರಿದ್ವಾರ ಮತ್ತು ರಿಷಿಕೇಶ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹುಟ್ಟಿಸಿದೆ.

ನೀರು ಉಕ್ಕಿ ಹರಿಯುತ್ತಿದ್ದು ಋಷಿ ಗಂಗಾ ಅಣೆಕಟ್ಟು ಧ್ವಂಸಗೊಂಡಿದೆ. ನೀರು ರಭಸವಾಗಿ ಹರಿಯುತ್ತಿದ್ದು, ಹರಿದ್ವಾರ, ಕೇದಾರನಾಥ ಹಾಗೂ ಬದ್ರೀನಾಥದವರೆಗೆ ಅಲರ್ಟ್ ಜಾರಿಗೊಳಿಸಲಾಗಿದೆ. ನೀರಿನ ರಭಸಕ್ಕೆ ‘ವಿಷ್ಣು ಪ್ರಯಾಗ್’ ಹೈಡ್ರೋ ಪವರ್ ಯೂನಿಟ್‌ಗೆ ಹಾನಿಯುಂಟಾಗಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.


ಹಿಮನದಿ ಸ್ಫೋಟಗೊಂಡ ಮಾಹಿತಿ ಮೇರೆಗೆ ಆಡಳಿತ ತಂಡ ಸ್ಥಳಕ್ಕೆ ತೆರಳಿದ್ದು, ಪೊಲೀಸರು ಧ್ವನಿವರ್ಧಕಗಳ ಮೂಲಕ ನದಿಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದಾರೆ. ಅಂತೆಯೇ ಕೂಡಲೇ ತಗ್ಗು ಪ್ರದೇಶ ಮತ್ತು ನದಿ ಪಾತ್ರದಲ್ಲಿರುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಚಮೋಲಿ, ಕರ್ಣ​ಪ್ರಯಾಗ್ ನಲ್ಲಿ ಅಲಕಾನಂದ ನದಿ ತಟದಲ್ಲಿ ವಾಸವಿರುವ ಜನರು ಮನೆ ಖಾಲಿ ಮಾಡಲು ಮುಂದಾಗಿದ್ದಾರೆ.

ರೈಣಿ ಗ್ರಾಮದ ಬಳಿ ಭಾರಿ ಹಿಮಕುಸಿತದಿಂದ ಅವಾಂತರ ಸೃಷ್ಟಿಯಾಗಿದ್ದು, ಈಗಾಗಲೇ ಧೌಲಿಗಂಗಾ ನದಿ ಪ್ರವಾಹದಿಂದ ಹಲವು ಮನೆಗೆ ಹಾನಿಯಾಗಿದೆ. ಋಷಿಗಂಗಾ ಪವರ್ ಪ್ರಾಜೆಕ್ಟ್‌ ಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಈವರೆಗೆ ಸುಮಾರು 150 ಜನ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಿಮಸ್ಪೋಟಕ್ಕೆ ತುತ್ತಾಗಿ ಹಲವು ಕಾರ್ಮಿಕರು ಕೊಚ್ಚಿಹೋಗಿರುವ ಬಗ್ಗೆ ಅನುಮಾನ ಉಂಟಾಗಿದೆ. ಸ್ಥಳಕ್ಕೆ ಎಸ್‌ಡಿಆರ್‌ಎಫ್, ಐಟಿಬಿಪಿ ಸಿಬ್ಬಂದಿ‌ ಆಗಮಿಸಿದ್ದಾರೆ. ನದಿಪಾತ್ರದ ಗ್ರಾಮಸ್ಥರನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಜೊತೆಗೆ ಪ್ರವಾಹದಲ್ಲಿ 2 ಸೇತುವೆಗಳು ಕೊಚ್ಚಿಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *