Connect with us

LATEST NEWS

ಶಿವಾಜಿ ಸ್ಟಿಕರ್ ಹಾಕಿದ್ದ ಬೈಕ್ ಸವಾರನಿಗೆ ಚೂರಿ ಇರಿತ..!

ಮಂಗಳೂರು ಪೆಬ್ರವರಿ 7 : ಮಂಗಳೂರು ನಗರದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ. ಇಂದು ರಾತ್ರಿ ಸುಮಾರು 9.45 ರ ಹೊತ್ತಿಗೆ ಈ ಘಟನೆ ಸಂಭವಿಸಿದೆ. ನಗರದ ಲಾಲ್ ಭಾಗ್ ಬಳಿ ಬೈಕಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ದಾಳಿ 6 ಜನರ ದುಷ್ಕರ್ಮಿಗಳು ಯುವಕನನ್ನು ಅಡ್ಡ ಹಾಕಿ ಶಿವಾಜಿ ಸ್ಟಿಕರ್ ಹಾಕಿದ್ದನ್ನು ವಿಚಾರಿಸಿ ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡ ಯುವಕನನ್ನು ದೀಪಕ್ ಎಂದು ಗುರುತ್ತಿಸಲಾಗಿದೆ.

ಹಿಂದೂ ಕಾರ್ಯಕರ್ತನಾಗಿದ್ದ ದೀಪಕ್ ಅವರು ಶಿವಾಜಿ ಸ್ಟಿಕರನ್ನು ತಮ್ಮ ಬೈಕಿಗೆ ಹಾಕಿದ್ದರು.ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಹೊತ್ತಿಗೆ ತಮ್ಮ ಬೈಕಿನಲ್ಲಿ ಹೋಗುತ್ತಿದ್ದ ಸಂಧರ್ಭ ಟಾರ್ಗೆಟ್ ಮಾಡಿ ದೀಪಕ್ ಮೇಲೆ ದಾಳಿ ನಡೆಸಲಾಗಿದ್ದು, ಗಾಯಗೊಂಡ ದೀಪಕ್ ರನ್ನು ಆಸಪತ್ರೆಗೆ ದಾಖಲು ಮಾಡಲಾಗಿದೆ.ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಹಿರಿಯ ಅಧಿಕಾರಿಗಳು ಧಾವಿಸಿದ್ದು, ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಆಸ್ಪತ್ರೆಗೆ ಧಾವಿಸಿದ ಶಾಸಕ ವೇದವ್ಯಾಸ್ ಕಾಮತ್ :

ಲಾಲ್ ಭಾಗ್ ಬಳಿ ಸಂಘಟನೆಯ ಕಾರ್ಯಕರ್ತ ದೀಪಕ್ ಮೇಲೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಗಾಯಗೊಳಿಸಿದ ವಿಚಾರ ತಿಳಿದು ತಕ್ಷಣವೇ ಶಾಸಕ ವೇದವ್ಯಾಸ್ ಕಾಮತ್ ಅವರು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಕುರಿತು ಮಾಹಿತಿ ಪಡೆದರು.

ತಕ್ಷಣವೇ ದಾಳಿಕೋರರನ್ನು ಬಂಧಿಸಿ ಕಠಿಣ ಕ್ರಮ ಜರಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಮಂಗಳೂರಿನಲ್ಲಿ ಶಾಂತಿ ಕದಡಲು ಯತ್ನಿಸುವ ಇಂತಹ ಘಟನೆಯ ಹಿಂದೆ ಯಾರೇ ಇದ್ದರೂ ಅವರನ್ನು ಬಿಡುವ‌ ಪ್ರಶ್ನೆಯೇ ಇಲ್ಲ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.