LATEST NEWS
ನೀರೆಬೈಲೂರಿನಲ್ಲಿ ವಾಹನ ಡಿಕ್ಕಿ ಹೊಡೆದು ಸಾವನಪ್ಪಿದ ಕಾಡುಪಾಪ
ಉಡುಪಿ : ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ನೀರೆಬೈಲೂರುನಲ್ಲಿ ಕಾಡುಪಾಪ ವೊಂದು ಸತ್ತು ಬಿದ್ದಿದೆ. ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದಿರಬಹುದೆಂದು ಎಂದು ಶಂಕಿಸಲಾಗಿದೆ.
ರಾತ್ರಿ ವೇಳೆ ಕಾಡುಪಾಪಗಳು ಹೆಚ್ಚಾಗಿ ಕಾರ್ಕಳ, ಹೆಬ್ರಿ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಕಾಡು ಪಾಪಗಳು ನಿರುಪದ್ರವಿಗಳು. ಬೆಳಗ್ಗಿನ ಜಾವ ರಸ್ತೆ ಬದಿಯಲ್ಲಿ ಕಾಡುಪಾಪ ಕಳೇಬರ ಕಾಣಿಸಿಕೊಂಡಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ವಲಯ ಅರಣ್ಯಾಧಿಕಾರಿಗಳು ಕಾಡುಪಾಪದ ಮರಣೋತ್ತರ ಪರೀಕ್ಷೆ ನಡೆಸಿ ಸರಕಾರದ ನಿರ್ದೇಶನದಂತೆ ಸುಟ್ಟಿದ್ದಾರೆ.