Connect with us

    LATEST NEWS

    ಅಮೇರಿಕಾದ ಮಿಲಿಟರಿ ವಿಮಾನದ ಟೈರ್ ಮೇಲೆ ಕುಳಿತು ಜೀವ ತೆತ್ತವರಲ್ಲಿ ಓರ್ವ ಪುಟ್ಬಾಲ್ ಆಟಗಾರ

    ಕಾಬೂಲ್ : ಅಮೇರಿಕಾದ ಯುದ್ದ ವಿಮಾನ ಟೈರ್ ಮೇಲೆ ಕುಳಿದು ಅಪ್ಘಾನಿಸ್ತಾನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕಳೆಗೆ ಬಿದ್ದು ಸಾವನಪ್ಪಿದ ಇಬ್ಬರಲ್ಲಿ ಓರ್ವ ಓರ್ವ ಫುಟ್ಬಾಲ್ ಆಟಗಾರ ಎಂದು ತಿಳಿದುಬಂದಿದೆ.


    ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದರಿಂದ ಹೆದರಿದ ಸ್ಥಳೀಯರು ದೇಶ ತೊರೆಯಲು ಮುಂದಾಗಿದ್ದರು. ಈ ವೇಳೆ ಅಮೆರಿಕಾ ವಿಮಾನ ಟೇಕಾಫ್ ವೇಳೆ ಟೈರ್ ಮೇಲೆ ಹತ್ತಿ ಪಲಾಯನಕ್ಕೆ ಮುಂದಾಗಿದ್ದರು. ಆದರೆ ಆಗಸದ ಮಧ್ಯದಲ್ಲಿ ವಿಮಾನದಿಂದ ಇಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದರು.


    ಹೌದು 19 ವರ್ಷದ ಝಾಕಿ ಅನ್ವಾರಿ ಆಟಗಾರ ದುರಂತ ಅಂತ್ಯ ಕಂಡಿದ್ದಾನೆ. ಅನ್ವರಿ ಸಾವನ್ನು ಅಫ್ಘಾನಿಸ್ತಾನದ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ಜನರಲ್ ಡೈರೆಕ್ಟರೇಟ್ ದೃಢಪಡಿಸಿದೆ. 16 ವರ್ಷದವನಿದ್ದಾಗಿನಿಂದ ಅನ್ವರಿ ಅಫ್ಘಾನ್ ರಾಷ್ಟ್ರೀಯ ಯುವ ತಂಡದಲ್ಲಿ ಆಡುತ್ತಿದ್ದು ಗೆಳೆಯರು ಮತ್ತು ತರಬೇತುದಾರರಿಗೆ ಪ್ರೀತಿ ಪಾತ್ರರಾಗಿದ್ದನು.

    ಹೀಗೆ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಮತ್ತೋರ್ವ ಡಾಕ್ಟರ್ ಅನ್ನೋದು ಬಯಲಾಗಿದೆ. ಕಾಬೂಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ವಾಲಿ ಸಲೇಕ್ ಮನೆ ಮೇಲೆ ಈ ವೈದ್ಯ ಬಿದ್ದಿದ್ದಾನೆ. ವಾಲಿ ಸಲೇಕ್ ಕುಟಂಬದೊಂದಿಗೆ ಕಾಬೂಲ್‌ನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ವಾಸವಾಗಿದ್ದಾನೆ. ಕೆಲಸ ಮುಗಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವೇಳೆ ಟೈಯರ್ ಸ್ಫೋಟದ ಶಬ್ದದಂತೆ ಕೇಳಿಸಿದೆ. ಏನಾಗುತ್ತಿದೆ ಎಂದು ಮನೆಯಿಂದ ಹೊರಂಬಂದು ಟರೇಸ್ ಮೇಲೆ ಹತ್ತಿದಾಗ ಮೃತದೇಹ ಛಿದ್ರ ಛಿದ್ರವಾಗಿ ಬಿದ್ದಿರುವುದು ಪತ್ತೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply