Connect with us

FILM

ಡೈವೋರ್ಸ್ ಗೆ ಮುಂದಾದ ಖ್ಯಾತ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್

ಮುಂಬೈ ಸೆಪ್ಟೆಂಬರ್ 25 : ಭಾರತೀಯ ಸಿನೆಮಾ ರಂಗದಲ್ಲಿ ಇದೀಗ ಹೆಚ್ಚು ಹೆಚ್ಚು ಡೈವೋರ್ಸ್ ಪ್ರಕರಣಗಳು ದಾಖಲಾಗುತ್ತಿದೆ. ಇತ್ತೀಚೆಗೆ ತಮಿಳು ನಟ ಜಯಂ ರವಿ ಡೈವೋರ್ಸ್ ಪಡೆಯಲು ಮುಂದಾದ ಬಳಿಕ ಇದೀಗ ಬಾಲಿವುಡ್​ನ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್​ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.


2016ರಲ್ಲಿ ಕಾಶ್ಮೀರ ಮೂಲದ ಉದ್ಯಮಿ ಮೋಸಿನ್ ಅಖ್ತರ್​ ಮೀರ್​ ಜೊತೆ ಉರ್ಮಿಳಾ ಅವರ ಮದುವೆ ನಡೆದಿತ್ತು. ಕಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಅವರು ವಿವಾಹವಾಗಿದ್ದರು. ಆದರೆ ಈಗ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ.


ಈಗಾಗಲೇ ಊರ್ಮಿಳಾ ಅವರು ಮುಂಬೈನ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ಪತಿ ಮೋಸಿನ್ ಅಖ್ತರ್ ಮೀರ್​ ಜೊತೆಗಿನ ದಾಂಪತ್ಯಕ್ಕೆ ಅವರು ಅಂತ್ಯ ಹಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
8 ವರ್ಷಗಳ ಕಾಲ ಸಂಸಾರ ನಡೆಸಿರುವ ಉರ್ಮಿಳಾ ಮತ್ತು ಮೋಸಿನ್ ಅವರು ಡಿವೋರ್ಸ್​ ಪಡೆಯುತ್ತಿರುವುದು ಯಾಕೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *