FILM
ಡೈವೋರ್ಸ್ ಗೆ ಮುಂದಾದ ಖ್ಯಾತ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್
ಮುಂಬೈ ಸೆಪ್ಟೆಂಬರ್ 25 : ಭಾರತೀಯ ಸಿನೆಮಾ ರಂಗದಲ್ಲಿ ಇದೀಗ ಹೆಚ್ಚು ಹೆಚ್ಚು ಡೈವೋರ್ಸ್ ಪ್ರಕರಣಗಳು ದಾಖಲಾಗುತ್ತಿದೆ. ಇತ್ತೀಚೆಗೆ ತಮಿಳು ನಟ ಜಯಂ ರವಿ ಡೈವೋರ್ಸ್ ಪಡೆಯಲು ಮುಂದಾದ ಬಳಿಕ ಇದೀಗ ಬಾಲಿವುಡ್ನ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.
2016ರಲ್ಲಿ ಕಾಶ್ಮೀರ ಮೂಲದ ಉದ್ಯಮಿ ಮೋಸಿನ್ ಅಖ್ತರ್ ಮೀರ್ ಜೊತೆ ಉರ್ಮಿಳಾ ಅವರ ಮದುವೆ ನಡೆದಿತ್ತು. ಕಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಅವರು ವಿವಾಹವಾಗಿದ್ದರು. ಆದರೆ ಈಗ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ.
ಈಗಾಗಲೇ ಊರ್ಮಿಳಾ ಅವರು ಮುಂಬೈನ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಪತಿ ಮೋಸಿನ್ ಅಖ್ತರ್ ಮೀರ್ ಜೊತೆಗಿನ ದಾಂಪತ್ಯಕ್ಕೆ ಅವರು ಅಂತ್ಯ ಹಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
8 ವರ್ಷಗಳ ಕಾಲ ಸಂಸಾರ ನಡೆಸಿರುವ ಉರ್ಮಿಳಾ ಮತ್ತು ಮೋಸಿನ್ ಅವರು ಡಿವೋರ್ಸ್ ಪಡೆಯುತ್ತಿರುವುದು ಯಾಕೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
You must be logged in to post a comment Login