ಕೊಲೆ ಪ್ರಕರಣ ಕೇರಳದ ಕುಖ್ಯಾತ ಕ್ರಿಮಿನಲ್ ನನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು

ಪುತ್ತೂರು ಅಕ್ಟೋಬರ್ 25: ಕೇರಳದ ಕುಖ್ಯಾತ ರೌಡಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಅನಾಝ್ (35) ಎಂದು ಗುರುತಿಸಲಾಗಿದ್ದು, ಈತ ಉಪ್ಪಿನಂಗಡಿಯ ಕುಪ್ಪೆಟ್ಟು ಎಂಬಲ್ಲಿ ಪತ್ತೆಯಾದ ವಕ್ತಿಯೊಬ್ಬರ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.

ಉಪ್ಪಿನಂಗಡಿಯ ಕುಪ್ಪೆಟ್ಟು ಸೆಪ್ಟೆಂಬರ್ 3 ರಂದು ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಪತ್ತೆಯಾದ ಶವ ಕೇರಳ ನಿವಾಸಿ ಉಣ್ಣಿ ಕೃಷ್ಣನ್ ಎಂದು ಗುರುತಿಸಲಾಗಿದ್ದು, ಉಣ್ಣಿಕೃಷ್ಣನ್ ಅವರನ್ನು ಕೊಲೆ ಮಾಡಿ ಉಪ್ಪಿನಂಗಡಿ ಸಮೀಪ ಎಸೆದು ಹೋಗಲಾಗಿತ್ತು.

ಪ್ರಕರಣ ಬೆನ್ನತ್ತಿದ್ದ ಉಪ್ಪಿನಂಗಡಿ ಎಸೈ ನಂದ ಕುಮಾರ್ ನೇತೃತ್ವದ ಪೊಲೀಸರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಅನಾಝ್ ನನ್ನು ಕೇರಳದ ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಅನಾಝ್ ಕೇರಳದಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿಕೊಂಡಿದ್ದ, ಹವಾಲ, ಲೂಟಿ, ಸ್ಮಗ್ಲಿಂಗ್ ಮೊದಲಾದ ದುಕೃತ್ಯಗಳಲ್ಲಿ ತೊಡಗಿದ್ದ ಆರೋಪಿಯಾಗಿದ್ದಾನೆ.

ಆರೋಪಿ ಅನಾಝ್ ನನ್ನು ಬಂಧಿಸಲು ತೆರಳಿದ್ದ ಉಪ್ಪಿನಂಗಡಿ ಎಸೈ ನಂದ ಕುಮಾರ್ ಅವರ ನೇತೃತ್ವದ ತಂಡಕ್ಕೆ ಕೇರಳ ಪೊಲೀಸರು ಯಾವುದೇ ಸಹಕಾರ ನೀಡಲಿಲ್ಲ ಎಂದು ಹೇಳಲಾಗಿದೆ. ಆದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

2 Shares

Facebook Comments

comments