Connect with us

DAKSHINA KANNADA

ಚೈತ್ರ ಕುಂದಾಪುರ ತಂಡದ ಸದಸ್ಯನಿಗೆ ಸಭ್ಯತೆಯ ಪಾಠ ಮಾಡಿದ ನ್ಯಾಯಾಧೀಶರು

ಚೈತ್ರ ಕುಂದಾಪುರ ತಂಡದ ಸದಸ್ಯನಿಗೆ ಸಭ್ಯತೆಯ ಪಾಠ ಮಾಡಿದ ನ್ಯಾಯಾಧೀಶರು

ಸುಳ್ಯ ಅಕ್ಟೋಬರ್ 25: ನಿನ್ನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲು ಬಂದ ಚೈತ್ರ ಕುಂದಾಪುರ ತಂಡದ ಸದಸ್ಯನಿಗೆ ನ್ಯಾಯಾಧೀಶರು ಸಭ್ಯತೆಯ ಪಾಠ ಹೇಳಿದ ಘಟನೆ ನಡೆದಿದೆ.

ನಿನ್ನೆ ನಡೆದ ಘರ್ಷಣೆಯಲ್ಲಿ ಹಿಂದೂ ಮುಖಂಡರಾದ ಗುರುಪ್ರಸಾದ್ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಹಿಂದೂ ನಾಯಕಿ ಚೈತ್ರಾ ಕುಂದಾಪುರ ಹಾಗೂ ಅವರ ಸಹಚರರನ್ನು ಇಂದು ಸುಳ್ಯದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಈ ಸಂದರ್ಭದಲ್ಲಿ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಅವರ ತಂಡದ ಸದಸ್ಯನೋರ್ವನಿಗೆ ನ್ಯಾಯಾಧೀಶರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೂದಲು ಹಾಗೂ ಗಡ್ಡ ಬಿಟ್ಟುಕೊಂಡಿದ್ದ ಯುವಕನನ್ನು ಗಮನಿಸಿದ ನ್ಯಾಯಾಧೀಶರು ಇದೇನು ಭಾರತವಾ, ಅಥವಾ ವಿದೇಶವಾ. ಕೂದಲನ್ನು ಹೆಣ್ಣುಮಕ್ಕಳಾಗೆ ಬಿಟ್ಟುಕೊಂಡಿದ್ಯಲ್ಲಾ. ಇನ್ನೊಮ್ಮೆ ನ್ಯಾಯಾಲಯಕ್ಕೆ ಬರುವಾಗ ಎಲ್ಲಾ ಕತ್ತರಿಸಿ ನೀಟಾಗಿ ಬರಬೇಕೆಂದು ತಾಕೀತು ಮಾಡಿದರು.

ಅಲ್ಲದೆ ಫೇಸ್ಬುಕ್ ನಲ್ಲಿ ಚೈತ್ರಾ ಕುಂದಾಪುರ ಅವರ ಮೇಲೆ ಮಾಡಿದ ಕಮೆಂಟ್ ಗಳಿಗೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ಪೋಲಿಸರು ಈ ಬಗ್ಗೆ ನಿಗಾವಹಿಸಬೇಕು ಎಂದು ಸೂಚಿಸಿದರು. ಹೆಣ್ಣು ಮಗಳಿಗೆ ಹೀಗೆಲ್ಲಾ ಮಾಡಬಾರದು ಎಂದು ಚೈತ್ರಾ ಪರ ಕಾಳಜಿಯನ್ನೂ ನ್ಯಾಯಾಧೀಶರು ತೋರಿಸಿದರು.

Facebook Comments

comments