ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಮಾರಾಮಾರಿ ಪ್ರಕರಣ ವಿವಾದ ತಣ್ಣಗಾಗಿಸಲು ಮುಂದಾದ ಆರ್ ಎಸ್ ಎಸ್

ಸುಳ್ಯ ಅಕ್ಟೋಬರ್ 25: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ವಿವಾದ ಹಾಗೂ ಹಿನ್ನಲೆಯಲ್ಲಿ ನಡೆದ ಮಾರಾಮಾರಿ ಪ್ರಕರಣವನ್ನು ಕೂತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಸಂಘಪರಿವಾರ ಮುಂದಾಗಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಹಿರಿಯ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ದೇವಸ್ಥಾನ ಹಾಗೂ ಮಠದ ನಡುವೆ ಇರುವ ವಿವಾದವನ್ನು ಒಂದೆಡೆ ಕುಳಿತು ಬಗೆಹರಿಸಬೇಕಿದೆ.

ಈ ವಿಚಾರಕ್ಕೆ ಉಡುಪಿಯ ಪೇಜಾವರ ಶ್ರೀಗಳು ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ಸ್ವಾಮೀಜಿ ಜೊತೆ ಮಾತುಕತೆ ನಡೆಸುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ.

ಆದರೆ ಇದಕ್ಕೆ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿ ಇದೀಗ ಬೀದಿ ಕಾಳಗದ ತನಕ ಬಂದಿರುವ ಬೆಳವಣಿಗೆ ಸರಿಯಲ್ಲ ಎಂದ ಅವರು ಆರ್.ಎಸ್.ಎಸ್ ಕೂಡಾ ಈ ಸಮಸ್ಯೆ ಬಗೆಹರಿಸಲು ಒಂದು ತಂಡವನ್ನೂ ಈಗಾಗಲೇ ರಚಿಸಿದೆ.

ಆದರೆ ತಂಡ ಈ ಬಗ್ಗೆ ಮಾತುಕತೆ ನಡೆಸಲು ವಿಳಂಬವಾಗಿದೆ ಎಂದ ಅವರು ಹಿರಿಯರು ಕೂತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

29 Shares

Facebook Comments

comments