LATEST NEWS
ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಢೆ ಹತ್ಯೆಗೆ ವಿಫಲ ಯತ್ನ

ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಢೆ ಹತ್ಯೆಗೆ ವಿಫಲ ಯತ್ನ
ಬೆಂಗಳೂರು, ಎಪ್ರಿಲ್ 18 : ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಢೆ ಹತ್ಯೆಗೆ ವಿಫಲ ಯತ್ನ ನಡೆದ ಘಟನೆ
ರಾಣೆಬೆನ್ನೂರು ಸಮೀಪ ನಡೆದಿದೆ.
ಈ ಕುರಿತು ಅನಂತ ಕುಮಾರ್ ಹೆಗ್ಡೆ ತಮ್ಮ ಫೇಸ್‌ಬುಕ್ ನಲ್ಲಿ ಬರೆದು ಕೊಂಡಿದ್ದು, ಘಟನೆಯ ಪ್ರತಿಯೊಂದು ವಿಚಾರವನ್ನು ಹಂಚಿ ಕೊಂಡಿದ್ದಾರೆ.

ಲಾರಿ ಹಯಿಸಿ ತನ್ನನ್ನು ಕೊಲ್ಲಲು ಯತ್ನಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ರಾನೆಬೆನ್ನೂರಿನ ಹಲೆಗೀರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಈ ಘಟನೆ ಸಂಭವಿಸಿದ್ದು, ಅನಂತ ಕುಮಾರ್ ಸಮಯ ಪ್ರಜ್ಞೆಯಿಂದ ಪಾರಾಗಿದ್ದಾರೆ. ಲಾರಿ ವಿರುದ್ದ ಧಿಕ್ಕಿನಲ್ಲಿ ಬಂದು ಮೊದಲು ಎಸ್ಕಾರ್ಟ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಅಫಘಾತದಲ್ಲಿ ವಾಹನದಲ್ಲಿದ್ದ ಓರ್ವನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾನೆ.
ಲಾರಿ ಚಾಲಕನನ್ನು ಸ್ಥಳೀಯರ ಸಹಾಯದಿಂದ ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ.
ಈತನನ್ನು ನಾಸಿರ್ ಎಂದು ಗುರುತ್ತಿಸಲಾಗಿದೆ. ಈತನನ್ನು ಪೋಲಿಸರು ತಪಾಸಣೆ ನಡೆಸಿದಾಗ ಆತ ಮದ್ಯ ಸೇವನೆ ಮಾಡಿಲ್ಲ ಎಂದು ತಿಳಿದು ಬಂದಿದ್ದು, ಅನಂತ ಕುಮಾರ್ ಹೆಗ್ಡೆ ಅವರ ಕೊಲೆ ಸಂಚಾಗಿತ್ತೇ ? ಎಂದು ಪೋಲಿಸ್ ತನಿಖೆಯಿಂದ ಬಹಿರಂಗವಾಗಬೇಕಿದೆ.
ಇದನ್ನು ಪೋಲಿಸರು ಗಂಭೀರಾವಾಗಿ ಪರಿಗಣಿಸಿ ಕೂಲಂಕುಶ ತನಿಖೆ ನಡೆಸಬೇಕೆಂದು ಅನಂತ ಕುಮಾರ್ ಹೆಗ್ಡೆ ಅವರು ಆಗ್ರಹಿಸಿದ್ದಾರೆ.