Connect with us

    BANTWAL

    ಬಂಟ್ವಾಳ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ, ಬಟ್ಟೆ ಬರೆ, ಬೈಕ್, ಬಿಟ್ಟು ಅರೆನಗ್ನ ಜೋಡಿ ಪರಾರಿ..!

    ಅಪ್ರಾಪ್ತ ಬಾಲಕಿಯನ್ನು ಬೈಕ್ ಸವಾರನೊಬ್ಬ ರಕ್ಷಿತಾರಣ್ಯಕ್ಕೆ ಕರೆತಂದಿದ್ದಾನೆಂಬ ಸುದ್ದಿ ಹರಡಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿ ಹುಡುಕಾಡಿದ್ದಾರೆ.  ಜನ ಸೇರುತ್ತಿದ್ದ ನಡುವೆಯೇ ಬೈಕ್, ಬಟ್ಟೆ ಬರೆಗಳನ್ನು ಅಲ್ಲೇ ಬಿಟ್ಟು ಅರೆನಗ್ನರಾಗಿದ್ದ ಯುವಕ-ವತಿ ಸ್ಥಳದಿಂದ ಪರಾರಿಯಾಗಿದ್ದಾರೆ.

    ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಸಾಲೆತ್ತೂರು ಭಾಗದ ರಕ್ಷಿತಾರಣ್ಯ ಅನೈತಿಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ.

    ಅಪ್ರಾಪ್ತ ಬಾಲಕಿಯನ್ನು ಬೈಕ್ ಸವಾರನೊಬ್ಬ ರಕ್ಷಿತಾರಣ್ಯಕ್ಕೆ ಕರೆತಂದಿದ್ದಾನೆಂಬ ಸುದ್ದಿ ಹರಡಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿ ಹುಡುಕಾಡಿದ್ದಾರೆ.  ಜನ ಸೇರುತ್ತಿದ್ದ ನಡುವೆಯೇ ಬೈಕ್, ಬಟ್ಟೆ ಬರೆಗಳನ್ನು ಅಲ್ಲೇ ಬಿಟ್ಟು ಅರೆನಗ್ನರಾಗಿದ್ದ ಯುವಕ-ವತಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಿತಾರಣ್ಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ನಶೆಯೇರಿಸುವ ಮಾತ್ರೆಗಳು, ಕಾಂಡೋಮ್ ಗಳು ಮತ್ತು ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಪೊಲೀಸರು ಯುವತಿ ಮತ್ತು ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಇನ್ನಾದರೂ ರಕ್ಷಿತಾರಣ್ಯ ಪರಿಸರ ಪುಂಡರಿಂದ ಮುಕ್ತವಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈ ಭಾಗದಲ್ಲಿ ದಿನಕ್ಕೆ ಎರಡು‌ ಮೂರು ಬಾರಿಯಾದರೂ‌ ಗಸ್ತು ಪೋಲಿಸ್ ವ್ಯವಸ್ಥೆ ಮಾಡಿದರೆ ಇಂತಹ ಸಮಸ್ಯೆಗಳಿಗೆ / ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದು ಸ್ಥಳಿಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.

    ಕೊಳ್ನಾಡು ಗ್ರಾಮದ ಸಾಲೆತ್ತೂರು ಕುಡ್ತಮುಗೇರು ಮೂಲಕ ಕನ್ಯಾನ ತಲುಪುವ ಒಳರಸ್ತೆಯ ಮೂಲಕ ಕಾಂಕ್ರೀಟ್ ರಸ್ತೆ ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತದೆ.ಪ್ರಸ್ತುತ ದಿನಗಳಲ್ಲಿ ದಿನವಿಡೀ ರಕ್ಷಿತಾರಣ್ಯ ಪ್ರದೇಶದಲ್ಲಿ ರಾಜಾರೋಷವಾಗಿ ಮದ್ಯ, ಡ್ರಗ್ಸ್ ಸೇವಿಸುವ ಪುಂಡರ ಕೇಂದ್ರವಾಗಿದೆ. ರಕ್ಷಿತಾರಣ್ಯ ಪ್ರದೇಶದ ಕುಳಾಲು, ಕುದ್ರಿಯ, ಮಂಕುಡೆ, ಕೋಜಿಗುರಿ ಮತ್ತು ಕುಂಟ್ರಕಳ ಪರಿಸರದ ನೂರಾರು ವಿದ್ಯಾರ್ಥಿಗಳು ಕನ್ಯಾನ, ವಿಟ್ಲ, ಮುಡಿಪು ಭಾಗಕ್ಕೆ ವಿದ್ಯಾರ್ಜನೆಗೆ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಹಲವಾರು ವಾಹನಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದ್ಯಾವುದಾರ ಪರಿವೆಯೇ ಇಲ್ಲದೇ ನಶೆಯಲ್ಲಿ ತೇಲಾಡುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪರಿಸರದ ಜನರ ತೀವ್ರ ಮುಜುಗರಕ್ಕೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply