Connect with us

    LATEST NEWS

    ಭೂಗತ ಪಾತಕಿ ರಶೀದ್ ಮಲಬಾರಿ ಬಂಧನ ?

    ಭೂಗತ ಪಾತಕಿ ರಶೀದ್ ಮಲಬಾರಿ ಬಂಧನ ?

    ಮಂಗಳೂರು ಜೂನ್ 29: ಡಿ ಕಂಪೆನಿಯ ಕುಖ್ಯಾತ ಶಾರ್ಪ್ ಶೂಟರ್ ರಶೀದ್ ಮಲಬಾರಿ ಅಬುದಾಬಿಯಲ್ಲಿ ಬಂಧನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭಾರತದಿಂದ ತಲೆ ಮರೆಸಿಕೊಂಡಿದ್ದ ರಶೀದ್ ಮಲಬಾರಿ ಅಬುದಾಬಿಯಲ್ಲಿ ಮೇ ತಿಂಗಳಲ್ಲೇ ಬಂಧನವಾಗಿರುವ ಬಗ್ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ.

    ಬಾಂಗ್ಲಾದೇಶದ ಪಾಸ್ ಪೋರ್ಟ್ ಹೊಂದಿರುವ ರಶೀದ್ ಮಲಬಾರಿ ಅಬುದಾಬಿಯಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ಅಬುದಾಬಿಯ ಪೊಲೀಸರಿಂದ ಬಂಧನಕ್ಕೆ ಒಳಪಟ್ಟಿದ್ದಾನೆ ಎಂದು ಹೇಳಲಾಗಿದೆ.

    2014 ಜುಲೈ 21 ರಂದು ರಾಜ್ಯ ಹೈಕೋರ್ಟ್ ಆದೇಶದಂತೆ ಬೆಂಗಳೂರು ಕಾರಾಗೃಹದಿಂದ ಹೊರ ಬಂದ ರಶೀದ್ ಮಲಬಾರಿ ಏಕಾಏಕಿ ಕಣ್ಮರೆಯಾಗಿದ್ದ. ರಶೀದ್ ಮಲಬಾರಿ ಜೈಲಿನಿಂದ ಹೊರಬರುವ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ ಬೆಂಗಳೂರು ಪೊಲೀಸರ ಬೇಜವಬ್ದಾರಿಯಿಂದ ರಶೀದ್ ಮಲಬಾರಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.

    ಒಂದು ಮಾಹಿತಿ ಪ್ರಕಾರ ರಶೀದ್ ಮಲಬಾರಿ ಮುಂಬೈಯಿಂದ ಸಮುದ್ರ ಮಾರ್ಗದ ಮೂಲಕ ಕೊಲ್ಲಿ ರಾಷ್ಟ್ರಕ್ಕೆ ಪರಾರಿಯಾಗಿದ್ದ ಬಗ್ಗೆ ಮಾಹಿತಿ ಇತ್ತು. ಆದರೆ ಈ ಬಗ್ಗೆ ರಾಜ್ಯ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಆದರೆ ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ರಶೀದ್ ಮಲಬಾರಿ ಅಬುದಾಬಿಯಲ್ಲಿ ಬಂಧನವಾಗಿರುವ ಬಗ್ಗೆ ಮಾಹಿತಿ ಇದೆ.

    Share Information
    Advertisement
    Click to comment

    You must be logged in to post a comment Login

    Leave a Reply