Connect with us

LATEST NEWS

ಲವ್ ಜಿಹಾದ್ ವಿರುದ್ದ ಕಾರ್ಯಾಚರಣೆಗೆ ಸಜ್ಜಾದ ಹಿಂದೂ ಟಾಸ್ಕ್ ಪೋರ್ಸ್

ಲವ್ ಜಿಹಾದ್ ವಿರುದ್ದ ಕಾರ್ಯಾಚರಣೆಗೆ ಸಜ್ಜಾದ ಹಿಂದೂ ಟಾಸ್ಕ್ ಪೋರ್ಸ್

ಮಂಗಳೂರು ಜೂನ್ 28 : ಲವ್ ಜಿಹಾದ್ ವಿರುದ್ದ ಕಾರ್ಯಾಚರಣೆಗೆ ಸದ್ದಿಲ್ಲದೇ ಹಿಂದೂ ಟಾಸ್ಕ್ ಫೋರ್ಸ್ ರಚನೆಗೆ ಚಾಲನೆ ನೀಡಲಾಗಿದ್ದು, ಕರಾವಳಿಯ ಫೈರ್ ಬ್ರಾಂಡ್ ಸ್ವಾಮೀಜಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿಜಿ ನೇತೃತ್ವದಲ್ಲಿ ಈ ಟಾಸ್ಕ್ ಪೋರ್ಸ್ ಕೆಲಸ ಮಾಡಲಿದೆ.

ದೇಶದಾದ್ಯಂತ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅದರಲ್ಲೂ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಈ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಲವ್ ಜಿಹಾದ್ ಪ್ರಕರಣಗಳನ್ನು ತಡೆಯಲು ಹಿಂದೂ ಟಾಸ್ಕ್ ಫೋರ್ಸ್ ರಚನೆಗೆ ಹಿಂದೂ ಸಂಘಟನೆಗಳು ಮುಂದಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಹಿಂದೂ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ಆರಂಭಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗುವಂತೆ ಮೊದಲು ಈ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ಆರಂಭವಾದರೂ ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಇದನ್ನು ವಿಸ್ತರಿಸುವ ಯೋಜನೆ ಹೊಂದಲಾಗಿದೆ.

ಲವ್ ಜಿಹಾದ್ ಪ್ರಕರಣ ಗಳನ್ನು ಬೆಳಕಿಗೆ ಬರುವ ಮೊದಲೇ ಪತ್ತೆ ಹಚ್ಚಿ ಪ್ರಕರಣ ಬಗೆಹರಿಸುವುದು ಈ ಟಾಸ್ಕ್ ಫೋರ್ಸ್ ನ ಜವಬ್ದಾರಿಯಾಗಿರುತ್ತದೆ. ಈ ಕುರಿತು ಮಾಹಿತಿ ನೀಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿಜಿ ಈ ಟಾಸ್ಕ್ ಪೋರ್ಸ್ ರಚನೆ ಕುರಿತು ಈಗಾಗಲೇ ಹಲವಾರು ಹಿಂದೂ ಪರ ಸಂಘಟನೆಗಳೊಂದಿಗೆ ಹಲವು ಸುತ್ತಿನ ಬೈಠಕ್ ನಡೆಸಲಾಗಿದ್ದು ಶೀಘ್ರದಲ್ಲೇ ಈ ಹಿಂದೂ ಟಾಸ್ಕ್ ಫೋರ್ಸ್ ಕಾರ್ಯಾಚರಣೆಗೆ ಇಳಿಯಲಿದೆ.

ಈ ಹಿಂದೂ ಟಾಸ್ಕ್ ಫೋರ್ಸ್ ಕುರಿತು ಸಾಮಾಜೀಕ ತಾಣದ ಮೂಲಕ ಮಾಹಿತಿಯನ್ನು ಹರಿಬಿಡಲಾಗಿದೆ. ಹಿಂದುತ್ವದ ಅವಹೇಳದ ವಿರುದ್ಧವೂ ಈ ಟಾಸ್ಕ್ ಫೋರ್ಸ್ ಹೋರಾಟ ನಡೆಸಲಿದೆ. ಧರ್ಮ ಜಾಗೃತಿ ಕಾರ್ಯದ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂಈ ಟಾಸ್ಕ್ ಫೋರ್ಸ್ ಮಾಡಲಿದೆ.

ಈ ಟಾಸ್ಕ್ ಪೋರ್ಸ್ ನಲ್ಲಿ ವೈದ್ಯರು, ಸೈಕ್ಯಾಟ್ರಿಸ್ಟ್ ಗಳು , ಸಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು ಸೇರಿದಂತೆ ಕಾನೂನು ತಜ್ಞರು, ಮಹಿಳೆಯರು ಸೇರಿದಂತೆ ಯುವಕ, ಯುವತಿಯರು ಇರಲಿದ್ದಾರೆ . ಲವ್ ಜಿಹಾದ್ ಪ್ರಕರಣಗಳಲ್ಲಿ ಸಿಲುಕಿದ ಯುವತಿಯರ ಮನ ಪರಿವರ್ತನೆ ಮಾಡುವುದು ಈ ಟಾಸ್ಕ್ ಫೋರ್ಸ್ ನ ಮೂಲ ಉದೇಶ ವಾಗಿರುತ್ತದೆ ಎಂದು ಹೇಳಲಾಗಿದೆ . ಲವ್ ಜಿಹಾದ್ ಬಗ್ಗೆ ಹಿಂದೂ ಯುವತಿಯರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಸಮರ್ಥ ವಾಗಿ ಬಳಸಿ ಕೊಳ್ಳಲು ತೀರ್ಮಾನಿಸಲಾಗಿದೆ .

ಈ ನಡುವೆ ಪ್ರತ್ಯೇಕ ಹಿಂದೂ ಪರ್ಸನಲ್ ಲಾ ಬೋರ್ಡ್ ರಚನೆ ಹಿಂದೂ ಟಾಸ್ಕ್ ಫೋರ್ಸ್ ಒತ್ತಾಯಿಸಿದೆ. ಇತ್ತೇಚಿನ ದಿಗಳಲ್ಲಿ ಹಿಂದೂ ಧರ್ಮನನ್ನು ಅವಹೇಳನ ಮಾಡುವ ಪ್ರಕರಣಗಳು ಹಚ್ಚಾಗಿದ್ದು ಅದರ ವಿರುದ್ಧ ಕಠಿಣ ಕ್ರಮ ಜರುಗಿಸುವ ದೃಷ್ಠಿಯಿಂದ ಪ್ರತ್ಯೇಕ ಹಿಂದೂ ಲಾ ಬೋರ್ಡ ಅಗತ್ಯವಿದೆ ಎಂದು ಟಾಸ್ಕ್‌ ಫೋರ್ಸ್ ಪ್ರತಿಪಾದಿಸಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಹಿಂದೂ ಲಾ ಬೋರ್ಡ್ ರಚನೆಗೆ ಒತ್ತಾಯಿಸಿದೆ . ಈ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರದ ಗೃಹ ಸಚಿವರಿಗೆ, ಕೇಂದ್ರ ಕಾನೂನು ಮಂತ್ರಾಲಯಕ್ಕೆ ಟಾಸ್ಕ್ ಫೋರ್ಸ್ ವತಿಯಿಂದ ಪತ್ರ ಕೂಡ ಬರೆಯಲಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ , ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ವಜ್ರದೇಹಿ ಮಠಕ್ಕೆ ಭೇಟಿ ನೀಡಿ ಟಾಸ್ಕ್ ಫೋರ್ಸ್ ರಚನೆ, ಉದ್ದೇಶದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹಿಂದೂ ಟಾಸ್ಕ್ ಫೋರ್ಸ್ ಹಾಗು ಪ್ರತ್ಯೇಕ ಹಿಂದೂ ಪರ್ಸನಲ್ ಲಾ ಬೋರ್ಡ ಕುರಿತು ರಾಷ್ಟ್ರೀಯ ಪಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಲಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *