Connect with us

    LATEST NEWS

    ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮುಂದುವರೆದೆ ಕೊರೊನಾ ಆರ್ಭಟ

    ಮಂಗಳೂರು ಜೂನ್ 29:ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಇಂದು ಮತ್ತೆ ಉಳ್ಳಾಲ ಪೊಲೀಸ್ ಠಾಣೆಯ ಆರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.


    ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಓರ್ವ ಹೋಂ ಗಾರ್ಡ್ ಸೇರಿ ಆರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ವರೆಗೆ ಉಳ್ಳಾಲ ಠಾಣೆಯ ಬರೋಬ್ಬರಿ 10 ಸಿಬ್ಬಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ.

    ಇನ್ನು ಜೂನ್ 20 ರಂದು ವ್ಯಾಪಾರಿಯೊಬ್ಬರ ಮೇಲೆ ತಲವಾರ್ ದಾಳಿ ನಡೆಸಿದ ಇಬ್ಬರು ಆರೋಪಿಗಳಿಗೂ ಕೊರೊನಾ ಸೊಂಕು ದೃಢಪಟ್ಟಿದೆ. ಈ ಇಬ್ಬರು ಆರೋಪಿಗಳನ್ನು ತೊಕ್ಕೊಟ್ಟು ಒಳಪೇಟೆ ಬಳಿ ದಾಳಿ ನಡೆಸಿದ ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ಹಿನ್ನಲೆ ಆರೋಪಿಗಳನ್ನು ಉಳ್ಳಾಲ ಪೊಲೀಸ್ ಠಾಣೆ ಸೆಲ್ ನಲ್ಲಿಟ್ಟಿದ್ದರು. ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಪಾಸಿಟಿವ್ ಆದ ಬೆನ್ನಲ್ಲೇ ಆರೋಪಿಗಳಿಗೂ ಪಾಸಿಟಿವ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply