ಅಂತರ್ ರಾಜ್ಯ ದ್ವಿಚಕ್ರವಾಹನ ಕಳ್ಳರ ಬಂಧನ

ಮಂಗಳೂರು ನವೆಂಬರ್ 14: ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂತರಾಜ್ಯ ಮೋಟಾರ್ ವಾಹನ ಕಳ್ಳತನದ 15 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು 3 ಜನ ಆರೋಪಿಗಳನ್ನು ಬಂಧಿಸಿ 20 ಲಕ್ಷ ರೂಪಾಯಿ ಮೌಲ್ಯದ 15 ದ್ವಿ ಚಕ್ರ ವಾಹನಗಳನ್ನು ಸ್ವಾದೀನಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕಾಸರಗೋಡು ನಿವಾಸಿಗಳಾದ ಶಾಹಿರ್, ಮೊಹಮ್ಮದ್ ಆದೀಲ್, ಅಬ್ದುಲ್ ಮುನಾವರ್ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬುಲೆಟ್ ಸೇರಿದಂತೆ ಒಟ್ಟು 15 ದ್ವಿಚಕ್ರ ವಾಹನಗಳನ್ನು ಕಳ್ಳತನ ನಡೆಸಿರುವುದು ಪತ್ತೆಯಾಗಿದೆ.

2 Shares

Facebook Comments

comments