Connect with us

    KARNATAKA

    ಮನೆ ಕೆಲಸಕ್ಕೆಂದು ಸೇರಿ ಕಳ್ಳತನ‌ ನಡೆಸುತ್ತಿದ್ದ ತಂಡ ಪೋಲೀಸ್ ಬಲೆಗೆ

    ಮನೆ ಕೆಲಸಕ್ಕೆಂದು ಸೇರಿ ಕಳ್ಳತನ‌ ನಡೆಸುತ್ತಿದ್ದ ತಂಡ ಪೋಲೀಸ್ ಬಲೆಗೆ

    ಪುತ್ತೂರು ನವೆಂಬರ್ 14: ಮನೆ ಕೆಲಸಕ್ಕೆಂದು ಸೇರಿ ಕಳ್ಳತನ‌ ನಡೆಸುತ್ತಿದ್ದ ತಂಡವನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
    ಬಂಧಿತ ತಂಡದಲ್ಲಿ ಮೂವರು ಮಹಿಳೆಯರಿದ್ದು ದೇವಮ್ಮ (19), ನಾಗಮ್ಮ (18) ಮತ್ತು ಗೀತಾ (24) ಎಂದು ಗುರುತಿಸಲಾಗಿದೆ.
    ಬಂಧಿತ ಮಹಿಳೆಯರು ಗದಗದ ಮೂಲದವರಾಗಿದ್ದು, ಅಲೆಮಾರಿ ಜನಾಂಗಕ್ಕೆ ಸೇರಿದ ಇವರು ಊರೂರು ತಿರುಗಿ ಭಿಕ್ಷೆ ಭೇಡಿ, ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

    ಬಂಧಿತ ಕಳ್ಳಿಯರಿಂದ ಸುಮಾರು 4.39 ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 156 ಗ್ರಾಂ ಚಿನ್ನ ಹಾಗೂ ಎರಡು ಮೊಬೈಲ್ ಒಳಗೊಂಡಿದೆ.

    ಬೇರೆ ಬೇರೆ ಕಡೆ ಗಳಲ್ಲಿ ಬಿಕ್ಷೆ ಬೇಡಿ ಅಲ್ಲದೇ ಸ್ಥಳೀಯವಾಗಿ ಶ್ರೀಮಂತರ ಮನೆಗಳಲ್ಲಿ ತೋಟದ ಕೆಲಸ, ಅಡಿಕೆ ಸುಲಿಯುವುದು, ಮತ್ತು ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಕೆಲಸಕ್ಕೆ ಹೋಗದ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿ , ಬಸ್ ನಿಲ್ದಾಣದಲ್ಲಿ, ಇನ್ನಿತರ ಜನನಿಭಿಡ ಪ್ರದೇಶಗಳಲ್ಲಿ ಚಿಕ್ಕ ಮಕ್ಕಳನ್ನು ಜೊತೆಯಲ್ಲಿರಿಸಿ, ಭಿಕ್ಷೆ ಬೇಡಿ, ಸಂಪಾದಿಸಿದ ಹಣವನ್ನು ಹೆಚ್ಚಾಗಿ ಮದ್ಯ ಸೇವನೆಗೆ ಮತ್ತು ಶೋಕಿ ಜೀವನಕ್ಕಾಗಿ ಬಳಸುತ್ತಿದ್ದು, ಸದ್ರಿ ಹಣವು ತಮ್ಮ ಶೋಕಿ ಜೀವನಕ್ಕೆ ಹಾಗೂ ಮದ್ಯಪಾನಕ್ಕೆ ಸಾಕಾಗದೇ ಇದ್ದುದ್ದರಿಂದ ಕೂಲಿ ಕೆಲಸ ಕ್ಕೆಂದು ತೆರಳಿದ ಮನೆಯ ಚಿನ್ನಾಭರಣಗಳನ್ನು ಕಳ್ಳತನ ಮಾಡುವ ಹವ್ಯಾಸವನ್ನು ಹೊಂದಿದ್ದರು.

    ಉಪ್ಪಿನಂಗಡಿ ಎಸ್.ಐ ನಂದಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply