ಯಾವುದೇ ಸರಕಾರ ಬಂದರೂ ರಾಮಮಂದಿರ ನಿರ್ಮಾಣವಾಗಬೇಕು – ಪಲಿಮಾರು ಶ್ರೀ

ಉಡುಪಿ ನವೆಂಬರ್ 14: ಚುನಾವಣೆಯೂ ರಾಮಮಂದಿರ ನಿರ್ಮಾಣ ಕಾಲ ಒಟ್ಟಾಗಿ ಬಂದಿದ್ದು, ಕೇಂದ್ರ ದಲ್ಲಿ ಯಾವುದೇ ಸರಕಾರ ಬರಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿ ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ರಾಮಮಂದಿರ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಪರ್ಯಾಯ ಪಿಠಾಧೀಶ ಪಲಿಮಾರು ಶ್ರೀಗಳು ನಮ್ಮದು ಪ್ರಜಾಪ್ರಭುತ್ವ ಸರಕಾರ, ಭಾರತದಲ್ಲಿ ಪ್ರಜೆಗಳೇ ಪ್ರಭುಗಳು, ಜನರೇ ದೇಶವನ್ನು ಆಳುವವರು ಪ್ರಜೆಗಳ ಮನಸ್ಸಲ್ಲಿರೋದು ಪಾರ್ಲಿಮೆಂಟ್ ನಲ್ಲಿ ಚರ್ಚೆಯಾಗಬೇಕು ಎಂದು ಹೇಳಿದರು.

ನಮ್ಮ ದೇಶವನ್ನು ರಾಮ ದೇವರು ಆಳಿದವರು, ಪೂಜ್ಯನೀಯರಿಗೊಂದು ಮಂದಿರ ಆಗಬೇಕು. ಯಾರದೂ ವಿವಾದವಿಲ್ಲದ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ರಾಮ ಭಕ್ತರು ತಮ್ಮ ಅನಿಸಿಕೆ ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.

ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ರಾಮಮಂದಿರ ನಿರ್ಮಾಣದ ಸಂಕಲ್ಪವಾಗಿತ್ತು. ದೇಶದ ಸಂಸದ್ ನಲ್ಲಿ ಮಸೂದೆ ಮಾಡುವವರು ಜನರು, ಅವರು ಪ್ರಜೆಗಳಿಗೆ ಬೇಕಾದ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಮಸೂದೆ ಜಾರಿಯಾಗಲಿ, ಅದಕ್ಕೆ ನಡೆಯಲಿರುವ ಸಹಿ ಅಭಿಯಾನದಲ್ಲಿ ಹಿಂದು ಬಾಂಧವರು ಕೈಜೋಡಿಸಬೇಕು ಎಂದು ಕರೆ ನೀಡಿದರು.

1 Shares

Facebook Comments

comments