LATEST NEWS
ಮಂಗಳೂರು – ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲೇ ಸಾವು…!!

ಮಂಗಳೂರು ಸೆಪ್ಟೆಂಬರ್ 19: ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ಮಹಾಕಾಳಿ ಪಡ್ಪು ಕ್ರಾಸ್ ಬಳಿ ಸೋಮವಾರ ನಸುಕಿನ ವೇಳೆ ನಡೆದಿದೆ. ಮೃತರನ್ನು ಚಿಕ್ಕಮಗಳೂರು ನಿವಾಸಿ ಪ್ರತಾಪ್ ಶೆಟ್ಟಿ ಎಂದು ಗುರುತಿಸಲಾಗಿದ್ದು, ಇವರು ತೊಕ್ಕೊಟ್ಟು ಅಂಬಿಕಾ ರೋಡ್ ಎಂಬಲ್ಲಿರುವ ವೈನ್ ಆ್ಯಂಡ್ ಡೈನ್ ಬಾರ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರತಾಪ್ ಜೊತೆ ಅವರ ಚಿಕ್ಕಮ್ಮನ ಮಗ ಅಭಿಯನ್ನು ಬೈಕ್ ನಲ್ಲಿ ಕುರಿಸಿಕೊಂಡು ಮುಂಜಾನೆ 2 ಗಂಟೆಗೆ ರೂಮ್ ಗೆ ತೆರಳುತ್ತಿದ್ದರು. ವೇಗವಾಗಿ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬೈಕ್ ಬಿದ್ದ ರಭಸಕ್ಕೆ ಸವಾರರಿಬ್ಬರು 50 ಮೀಟರ್ ನಷ್ಟು ದೂರ ಎಸೆಯಲ್ಪಟ್ಟಿದ್ದು ಸವಾರ ಪ್ರತಾಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಭಿ ಶೆಟ್ಟಿ(22) ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
