Connect with us

DAKSHINA KANNADA

ಮದರಸಾ ಶಿಕ್ಷಕನಿಂದ ಬಾಲಕನಿಗೆ ಹಲ್ಲೆ

Share Information

ಉಳ್ಳಾಲ, ಸೆಪ್ಟೆಂಬರ್ 19: ಬಾಲಕನೋರ್ವನಿಗೆ ಮದರಸಾದ ಶಿಕ್ಷಕ ಹಲ್ಲೆ ನಡೆಸಿರುವ ಘಟನೆ ಹರೇಕಳ ಗ್ರಾಮದ ದೇರಿಕಟ್ಟೆ ಎಂಬಲ್ಲಿ ಶನಿವಾರ ಸಂಜೆ ವೇಳೆ ಸಂಭವಿಸಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರೇಕಳ ದೇರಿಕಟ್ಟೆ ಮಹಮ್ಮದ್ ಎಂಬವರ ಪುತ್ರ ಹಫೀಲ್ ಅಹಮ್ಮದ್ (11) ಹಲ್ಲೆಗೊಳಗಾದ ಬಾಲಕ. ಮದರಸಾಗೆ ತೆರಳಿದ್ದ ಬಾಲಕನಿಗೆ ವಿಚಾರವೊಂದಕ್ಕೆ ಸಂಬಂಧಿಸಿ ಶಿಕ್ಷಕ ಉಸ್ತದ್ ಯಹ್ಯಾ ಫೈಝಿ ಎಂಬವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಪೋಷಕರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply