Connect with us

LATEST NEWS

ಕೇರಳ – ಓಣಂ ಲಾಟರಿಯಲ್ಲಿ 25 ಕೋಟಿ ಗೆದ್ದ ಅಟೋ ಚಾಲಕ

ತಿರುವನಂತಪುರ ಸೆಪ್ಟೆಂಬರ್ 19: ಕೇರಳದ ಓಣಂ ಲಾಟರಿ ಮತ್ತೆ ಆಟೋ ರಿಕ್ಷಾ ಚಾಲಕನಿಗೆ ಒಲಿದು ಬಂದಿದ್ದು, ಈ ಬಾರಿಯ ಓಣಂ ಬಂಪರ್ ಲಾಟರಿ ಆಟೊ ಚಾಲಕ ಅನೂಪ್‌ ಅವರಿಗೆ ಪ್ರಥಮ ಬಹುಮಾನ ₹ 25 ಕೋಟಿ ಲಭಿಸಿದೆ.


ಶನಿವಾರ ಅವರು ಲಾಟರಿ ಟಿಕೆಟ್‌ (ಟಿಜೆ750605) ಖರೀದಿಸಿದ್ದರು. ತೆರಿಗೆ ಹಾಗೂ ಕಮಿಷನ್‌ ಕಳೆದು ಅವರಿಗೆ ₹ 15.75 ಕೋಟಿ ಸಿಗಲಿದೆ. ಈ ಬಂಪರ್‌ ಬಹುಮಾನ ತಂದಿರುವ ಟಿಕೆಟ್ಅನ್ನು ಮಾರಾಟ ಮಾಡಿರುವ ತಿರುವನಂತಪುರದ ಭಗವತಿ ಏಜೆನ್ಸಿಗೆ ಕಮಿಷನ್‌ ರೂಪದಲ್ಲಿ ₹ 2.5 ಕೋಟಿ ಸಿಗಲಿದೆ. ಅನೂಪ್‌ ಅವರು ಆಟೊ ಚಾಲಕರಾಗಿರುವ ಜೊತೆಗೆ ಬಾಣಸಿಗರೂ ಹೌದು. ಬಾಣಸಿಗನಾಗಿ ಒಳ್ಳೆಯ ಉದ್ಯೋಗ ಅರಸಿ ಮಲೇಷ್ಯಾಕ್ಕೆ ಹೋಗಲು ಯೋಜಿಸಿದ್ದರು.

ಬೃಹತ್‌ ಮೊತ್ತದ ಲಾಟರಿ ಬಹುಮಾನ ಸಿಕ್ಕಿರುವ ಕಾರಣ ವಿದೇಶಕ್ಕೆ ಹಾರುವ ಯೋಚನೆಯನ್ನು ಕೈಬಿಟ್ಟಿದ್ದಾರೆ. ಈ ವರ್ಷವಷ್ಟೇ ಓಣಂ ಲಾಟರಿಯ ಬಂಪರ್‌ ಬಹುಮಾನದ ಮೊತ್ತವನ್ನು ₹ 25 ಕೋಟಿಗೆ ಹೆಚ್ಚಿಸಲಾಗಿದೆ. ಪ್ರತಿ ಟಿಕೆಟ್‌ ದರ ₹ 500 ಇದ್ದು, ದಾಖಲೆಯ 66.5 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಕಳೆದ ವರ್ಷದ ಓಣಂ ಬಂಪರ್‌ ಲಾಟರಿಯ ಬಹುಮಾನದ ಮೊತ್ತ ₹ 12 ಕೋಟಿ ಇತ್ತು. ಆ ಬಹುಮಾನ ಸಹ ಕೊಚ್ಚಿಯ ಆಟೊ ಚಾಲಕ ಜಯಪಾಲನ್‌ ಎಂಬುವವರ ಪಾಲಾಗಿತ್ತು.

Advertisement
Click to comment

You must be logged in to post a comment Login

Leave a Reply